ETV Bharat / city

ಸಿದ್ದರಾಮಯ್ಯನವರಿಗೆ ಕಾಮನ್ ಸೆನ್ಸ್ ಇಲ್ಲ: ಸಚಿವ ಈಶ್ವರಪ್ಪ ಕಿಡಿ - Siddaramaiah has no common sense:

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಟ್ವೀಟ್​ ಮಾಡಿರುವ ಕುರಿತು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಖಂಡನೆ ವ್ಯಕ್ತಪಡಿಸಿದ್ದಾರೆ.

Minister Eshwarappa
ಸಚಿವ ಈಶ್ವರಪ್ಪ
author img

By

Published : Jan 3, 2020, 3:30 PM IST

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಟ್ವೀಟ್​ ಮಾಡಿರುವ ಕುರಿತು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಖಂಡನೆ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ಪ್ರತಿಕ್ರಿಯೆ

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಕಾಮನ್ ಸೆನ್ಸ್ ಇಲ್ಲ. ಮುಖ್ಯಮಂತ್ರಿಯಾಗಿದ್ದವರಿಗೆ ಪ್ರಧಾನ ಮಂತ್ರಿಯ ಬಗ್ಗೆ ಹೇಗೆ ಮಾತನಾಡಬೇಕು, ಯಾವ ಪದ ಬಳಕೆ ಮಾಡಬೇಕು ಅಂತ ಗೊತ್ತಿಲ್ಲ. ಯಾರಿಗೆ ಆಗಲಿ ಮಾತನಾಡಲು ಒಂದು ಭಾಷೆ ಇದೆ. ದೇಶದಲ್ಲಿ ಜಲ ಪ್ರಳಯ ಆಗಿದೆ. ರಾಜ್ಯಕ್ಕೆ ಸಾಕಷ್ಟು ಹಣ ಬಂದಿದೆ. ಇನ್ನೂ ಹಣ ಬರಬೇಕಿದೆ. ಹಣ ಬಿಡುಗಡೆ ಮಾಡಬೇಕು ಅಂತ ನಾವು ಪ್ರಧಾನ ಮಂತ್ರಿಯವರನ್ನು ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಬರ ಬಂದಾಗ ಕೇಂದ್ರದ ಕಾಂಗ್ರೆಸ್ ಸರ್ಕಾರ ಎಷ್ಟು ಹಣ ನೀಡಿತ್ತು ಅಂತ ನಮಗೂ ಗೊತ್ತಿದೆ. ನಾವು ಕೂಡ ಹಿಂದೆ ಹಣಕ್ಕಾಗಿ ಒತ್ತಾಯ ಮಾಡಿದ್ದೇವೆ. ಈ ರೀತಿಯ ಪದಗಳನ್ನು ಬಳಸಿರಲಿಲ್ಲ. ಈಗ ಕಾಂಗ್ರೆಸ್ ನವರಿಗೆ ಅದರಲ್ಲೂ ಸಿದ್ದರಾಮಯ್ಯನವರಿಗೆ ನಿರಾಸೆ ಮೂಡಿದೆ. ಅವರು ಸರ್ಕಾರ ಕಳೆದುಕೊಂಡರು, ಸಿಎಂ ಸ್ಥಾನ ಕಳೆದು ಕೊಂಡರು, ಮುಂದೆ ಅಧಿಕಾರ ಸಿಗುತ್ತದೆಯೂ ಇಲ್ಲ, ಅಂತ ಅವರಿಗೆ ಬೇಸರ ಮೂಡಿದೆ. ಇದಕ್ಕೆ ಅವರು ಒಳ್ಳೆಯ ಭಾಷೆ ಬಳಸುತ್ತಿಲ್ಲ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಬಗ್ಗೆ ಸಿದ್ದರಾಮಯ್ಯನವರು ಬಳಸಿರುವ ಪದವನ್ನು ನಾನು ಖಂಡಿಸುತ್ತೇನೆ. ನಾವು ದೇವರನ್ನು ಧರ್ಮವನ್ನು ನಂಬಿದ್ದೇವೆ. ಅದಕ್ಕೆ ವಿಭೂತಿ, ರುದ್ರಾಕ್ಷಿ ಹಾಕಿಕೊಳ್ಳುತ್ತೇವೆ. ಇದಕ್ಕೆ ನೀವು ಟೀಕೆ ಮಾಡುವುದು ಸರಿಯಲ್ಲ. ನಿಮಗೆ ದೇವರ ಬಗ್ಗೆ, ಧರ್ಮದ ಬಗ್ಗೆ ನಂಬಿಕೆ ಇಲ್ಲ. ನಮಗೆ ನಂಬಿಕೆ ಇದೆ. ನಾವು ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ದೇಶವನ್ನು ಉದ್ಧಾರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದರು.

ಇನ್ನು ಡಿ.ಕೆ.ಶಿವಕುಮಾರ್ ಅವರು ಏಸು ಪ್ರತಿಮೆ ನಿರ್ಮಾಣ ಮಾಡಲು ಅವಕಾಶ ಮಾಡಿ ಕೊಟ್ಟಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಭೂಮಿಯನ್ನು ಯಾರು, ಯಾಕೆ ಕೊಟ್ಟರು ಎಂಬ ಬಗ್ಗೆ ಸರಿನಾ, ತಪ್ಪಾ ಅಂತ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ರು.

Intro:ಸಿದ್ದರಾಮಯ್ಯನವರಿಗೆ ಕಾಮನ್ ಸೆನ್ಸ್ ಇಲ್ಲ: ಸಚಿವ ಈಶ್ವರಪ್ಪ. ಈ ವೇಳೆ ಪ್ರದಾನಿ ನರೇಂದ್ರ ಮೋದಿ ರವರು ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಟ್ವೀಟ್ ಗೆ ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಖಂಡನೆ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಕಾಮನ್ ಸೆನ್ಸ್ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಒಬ್ಬ ಮುಖ್ಯಮಂತ್ರಿಯಾಗಿದ್ದವರಿಗೆ ಪ್ರದಾನ ಮಂತ್ರಿಯ ಬಗ್ಗೆ ಹೇಗೆ ಮಾತನಾಡಬೇಕು , ಯಾವ ಪದ ಬಳಕೆ ಅಂತ ಗೂತ್ತಿಲ್ಲ. ಯಾರಿಗೆ ಆಗಲಿ ಮಾತನಾಡಿದಲು ಒಂದು ಭಾಷೆ ಇದೆ. ಇಡಿ ಭಾರತ ದೇಶ ಸಿದ್ದರಾಮಯ್ಯ ಸಿಎಂ ಆಗಿದ್ದರು ಎಂಬ ಕುರಿತು ನೋವು ವ್ಯಕ್ತಪಡಿಸುತ್ತಿದೆ. ಭಾರತದ್ಯಾಂತ ಜಲ ಪ್ರಳಯ ಆಗಿದೆ. ರಾಜ್ಯಕ್ಕೆ ಸಾಕಷ್ಟು ಹಣ ಬಂದಿದೆ. ಇನ್ನೂ ಹಣ ಬರಬೇಕಿದೆ. ಹಣ ಬಿಡುಗಡೆ ಮಾಡಬೇಕು ಅಂತ ನಾವು ಪ್ರದಾನ ಮಂತ್ರಿರವರನ್ನು ಮನವಿ ಮಾಡಿ ಕೊಳ್ಳುತ್ತೆವೆ.

Body:ರಾಜ್ಯದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಸಿಎಂ ಆದವರು ಪ್ರದಾನ ಮಂತ್ರಿಯ ಬಗ್ಗ ಬಳಸುತ್ತಿರುವ ಪದ್ ಹಗ್ಗ ನೋವಾಗುತ್ತದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬರ ಬಂದಾಗ ಕೇಂದ್ರದ ಕಾಂಗ್ರೆಸ್ ಸರ್ಕಾರ ಎಷ್ಟು ಹಣ ನೀಡಿತ್ತು ಅಂತ ನಮಗೂ ಗೂತ್ತಿದೆ. ನಾವು ಹಿಂದೆ ಹಣಕ್ಕಾಗಿ ಒತ್ತಾಯ ಮಾಡಿದ್ದೆವೆ ವಿನಃ ಈ ರೀತಿಯ ಪದಗಳನ್ನು ಬಳಸಿರಲಿಲ್ಲ. ಈಗ ಕಾಂಗ್ರೆಸ್ ನವರಿಗ ಅದರಲ್ಲೂ ಸಿದ್ದರಾಮಯ್ಯನವರಿಗೆ ನಿರಾಸೆ ಮೂಡಿದೆ. ಅವರು ಸರ್ಕಾರ ಕಳೆದು ಕೊಂಡರು, ಸಿಎಂ ಸ್ಥಾನ ಕಳೆದು ಕೊಂಡರು, ಮುಂದೆ ಅಧಿಕಾರ ಸಿಗುತ್ತದೆಯೂ ಇಲ್ಲ ಅಂತ ಅವರಿಗೆ ಬೇಸರ ಮೂಡಿದೆ. ಇದಕ್ಕೆ ಅವರು ಒಳ್ಳೆಯ ಭಾಷೆ ಬಳಸುತ್ತಿಲ್ಲ.

Conclusion:ಪ್ರದಾನ ಮಂತ್ರಿ ನರೇಂದ್ರ ಮೋದಿರವರ ಬಗ್ಗೆ ಸಿದ್ದರಾಮಯ್ಯನವರು ಬಳಸಿರುವ ಪದವನ್ನು ನಾನು ಖಂಡಿಸುತ್ತೆನೆ ಎಂದರು. ನಾವು ದೇವರನ್ನು ಧರ್ಮವನ್ನು ನಂಬಿದ್ದೆವೆ, ಅದಕ್ಕೆ ವಿಭೂತಿ, ರುದ್ರಾಕ್ಷಿ ಹಾಕಿ ಕೊಳ್ಳುತ್ತೆವೆ. ಇದಕ್ಕೆ ನೀವು ಟೀಕೆ ಮಾಡುವುದು ಸರಿಯಲ್ಲ. ನಿಮಗೆ ದೇವರ ಬಗ್ಗೆ ಧರ್ಮದ ಬಗ್ಗೆ ನಂಬಿಕೆ ಇಲ್ಲ. ನಮಗೆ ನಂಬಿಕೆ ಇದೆ. ನಾವು ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ದೇಶವನ್ನು ಉದ್ದಾರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೆವೆ ಎಂದರು. ಕಾಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ಬಗ್ಗೆ ಅಡ್ಡಗೋಡೆಯ ಮೇಕೆ ದೀಪ ವಿಟ್ಟಂತೆ ಮಾತನಾಡಿದ ಈಶ್ವರಪ್ಪ: ಡಿ.ಕೆ.ಶಿವಕುಮಾರ್ ರವರು ಏಸು ಪ್ರತಿಮೆ ನಿರ್ಮಾಣ ಮಾಡಲು ಅವಕಾಶ ಮಾಡಿ ಕೊಟ್ಟಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಭೂಮಿಯನ್ನು ಯಾರು, ಯಾಕೆ ಕೊಟ್ಟರು ಎಂಬ ಬಗ್ಗೆ ಇದು ಸರಿನ, ತಪ್ಪಾ ಅಂತ ಚರ್ಚೆ ನಡೆಯುತ್ತಿದೆ. ನಾನು ಈಗ ಇದೇ ಆಗಬೇಕು ಅಂತ ಹೇಳೂವುದಕ್ಕೆ ಇಷ್ಟ ಪಡೂದಿಲ್ಲ ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರು. ಬೈಟ್: ಕೆ.ಎಸ್.ಈಶ್ವರಪ್ಪ. ಗ್ರಾಮೀಣಾಭಿವೃದ್ದಿ ಖಾತೆ ಸಚಿವರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.