ETV Bharat / city

ಸಂತ ಹಜರತ್ ಮೈನುದ್ದೀನ್ ಚಿಸ್ತಿ ವಿರುದ್ಧ ಜಿತೇಂದ್ರ ಸರಸ್ವತಿ ಹೇಳಿಕೆಗೆ ಮುಸ್ಲಿಂ ಸಮುದಾಯ ಖಂಡನೆ

ದೇಶದಲ್ಲಿ ಹಿಂದೂ, ಮುಸ್ಲಿಂಮರು ಅಣ್ಣತಮ್ಮಂದಿರಂತೆ ಬದುಕುತ್ತಿದ್ದಾರೆ. ಆದರೆ, ಇಂತಹ ಹೇಳಿಕೆಗಳಿಂದ ದೇಶದಲ್ಲಿ ಗಲಭೆ, ಹಿಂಸಾಚಾರಗಳು ಉಂಟಾಗುತ್ತದೆ. ಹಾಗಾಗಿ, ಜಿತೇಂದ್ರ ಸರಸ್ವತಿ ವಿರುದ್ಧ ಕಾನೂನು ಕ್ರಮಕೈಗೊಳ್ಳದೇ ಹೋದ್ರೆ ಮುಸ್ಲಿಂ ಸಂಘಟನೆಗಳಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು..

shivamogga-sunni-muslim-community-protest
ಮುಸ್ಲಿಂ ಸಮುದಾಯ ಪ್ರತಿಭಟನೆ
author img

By

Published : Jan 25, 2021, 3:48 PM IST

ಶಿವಮೊಗ್ಗ : ದೇಶದ್ರೋಹ ಕಾಯ್ದೆ ಅಡಿ ಜಿತೇಂದ್ರ ಸರಸ್ವತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಸುನ್ನಿ ಜಮೈತುಲ್ ಉಲ್ಮ ಕಮೀಟಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಸಂತ ಹಜರತ್ ಖ್ವಾಜಾ ಮೈನುದ್ದೀನ್ ಚಿಸ್ತಿ ಕುರಿತು ದೇಶದ್ರೋಹ ಹೇಳಿಕೆ ಖಂಡಿಸಿ ಪ್ರತಿಭಟನೆ..

ಸಂತ ಹಜರತ್ ಖ್ವಾಜಾ ಮೈನುದ್ದೀನ್ ಚಿಸ್ತಿ ಅವರ ಬಗ್ಗೆ ಧರ್ಮನಿಂದನೆ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿರುವ ರಾಜಾಸ್ಥಾನದ ಜಿತೇಂದ್ರ ಸರಸ್ವತಿ ಅವರನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯ್ತು.

ಓದಿ-ಎಫ್​ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಬಾಗಲಕೋಟೆಯಲ್ಲಿ ಮತ್ತೋರ್ವ ಸಿಸಿಬಿ ವಶಕ್ಕೆ

ದೇಶದಲ್ಲಿ ಹಿಂದೂ, ಮುಸ್ಲಿಂಮರು ಅಣ್ಣತಮ್ಮಂದಿರಂತೆ ಬದುಕುತ್ತಿದ್ದಾರೆ. ಆದರೆ, ಇಂತಹ ಹೇಳಿಕೆಗಳಿಂದ ದೇಶದಲ್ಲಿ ಗಲಭೆ, ಹಿಂಸಾಚಾರಗಳು ಉಂಟಾಗುತ್ತದೆ. ಹಾಗಾಗಿ, ಜಿತೇಂದ್ರ ಸರಸ್ವತಿ ವಿರುದ್ಧ ಕಾನೂನು ಕ್ರಮಕೈಗೊಳ್ಳದೇ ಹೋದ್ರೆ ಮುಸ್ಲಿಂ ಸಂಘಟನೆಗಳಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.