ಶಿವಮೊಗ್ಗ: ಗುರುವಾರ ರಾತ್ರಿ ಹುಣಸೋಡಿನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಆರು ಮಂದಿ ಪೈಕಿ ಐದು ಮಂದಿ ಗುರುತು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸೋಡಿನಲ್ಲಿ ನಡೆದ ಸ್ಫೋಟದಲ್ಲಿ ಈವರೆಗೆ 6 ಜನರು ಮೃತರಾಗಿರುವುದು ತಿಳಿದು ಬಂದಿದ್ದು, 5 ಜನರ ಮೃತದೇಹಗಳನ್ನು ಅವರ ಸಂಬಂಧಿಕರು ಗುರುತಿಸಿದ್ದಾರೆ.
ಓದಿ-ಕೆಎಸ್‌ಆರ್‌ಟಿಸಿ ಬಸ್-ಕಾರು ಮುಖಾಮುಖಿ: ಮಹಿಳಾ PSI ಸೇರಿ ನಾಲ್ವರ ದುರ್ಮರಣ
ಮೃತರನ್ನು ಪವನ್ ಕುಮಾರ್ (29) ರಾಯದುರ್ಗ, ಅನಂತಪುರಂ ಜಿಲ್ಲೆ, ಆಂಧ್ರ ಪ್ರದೇಶ. ಜಾವೀದ್ ( 28) ರಾಯದುರ್ಗ, ಅನಂತಪುರಂ ಜಿಲ್ಲೆ, ಆಂಧ್ರ ಪ್ರದೇಶ. ಚೆಲಿಮಾನು ರಾಜು (24) ರಾಯದುರ್ಗ, ಅನಂತಪುರಂ ಜಿಲ್ಲೆ, ಆಂಧ್ರ ಪ್ರದೇಶ. ಪ್ರವೀಣ (36 ) ಅಂತರಗಂಗೆ, ಭದ್ರಾವತಿ ಮತ್ತು ಮಂಜುನಾಥ (35) ಅಂತರಗಂಗೆ ಕ್ಯಾಂಪ್, ಭದ್ರಾವತಿ ಎಂದು ಪತ್ತೆ ಹಚ್ಚಲಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಇನ್ನೊಂದು ಮೃತದೇಹದ ಗುರುತು ಪತ್ತೆಯಾಗುವುದು ಬಾಕಿ ಇದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.