ಶಿವಮೊಗ್ಗ: ನಾಡ ಹಬ್ಬ ದಸಾರಾ ಪ್ರಯುಕ್ತ ಆಯೋಜಿಸಿದ್ದ ಯುವ ದಸರಾ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಗಾಯಕ ನವೀನ್ ಸಜ್ಜು ಅವರ ಹಾಡಿಗೆ ಶಿವಮೊಗ್ಗದ ಜನರು ಕುಣಿದು ಕುಪ್ಪಳಿಸಿದ್ದಾರೆ.
ಹೌದು ನಾಡ ಹಬ್ಬ ದಸರಾವನ್ನು ಈ ಬಾರಿ ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಅದರ ಪ್ರಯುಕ್ತ ಆಯೋಜಿಸಿದ್ದ ಯುವ ದಸರಾ ಕಾರ್ಯಕ್ರಮದಲ್ಲಿ ಗಾಯಕ ನವೀನ್ ಸಜ್ಜು ಸಿನಿಮಾ ಹಾಡುಗಳನ್ನು ಹಾಗೂ ಜಾನಪದ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಬಂದಿದ್ದವರನ್ನು ರಂಜಿಸಿದರು.
ನಗರದ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ನವೀನ್ ಸಜ್ಜು ಅವರೊಂದಿಗೆ ಹಿನ್ನೆಲೆ ಗಾಯಕರಾದ ಅಜಯ್ ವಾರಿಯರ್, ಪ್ರಕಾಶ್ ರೂಪ, ಸುರಕ್ಷಾ ದಾಸ್ ಮತ್ತು ತಂಡದವರು ಹಾಡಿದ ಹಾಡಿಗೆ ನಗರದ ಜನರು ಕುಣಿದು ಕುಪ್ಪಳಿಸಿದರು.
ಇದನ್ನೂ ಓದಿ: ನಂದಿಧ್ವಜ ಪೂಜೆ ನೆರವೇರಿಸಿ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ