ಶಿವಮೊಗ್ಗ: ತುಂಗಾ ನಗರದ ಬಳಿ ಅಕ್ರಮವಾಗಿ ಎರಡು ಗೋವುಗಳನ್ನು ಸಾಗಿಸುತ್ತಿದ್ದ ಆಟೋವನ್ನು ಯುವಕರು ತಡೆದು ನಿಲ್ಲಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ದೊಡ್ಡಪೇಟೆ ಪೊಲೀಸರು ಗೋವುಗಳಿದ್ದ ಆಟೋವನ್ನು ವಶಕ್ಕೆ ಪಡೆದು ಹಸುಗಳನ್ನು ಗೋಶಾಲೆಗೆ ಸೇರಿಸಿದ್ದಾರೆ.
ಪುರದಾಳು ಗ್ರಾಮದ ಸತೀಶ್ ಅವರಿಗೆ ಸೇರಿದ ಹಸುಗಳು ಎನ್ನಲಾಗಿದ್ದು, ಕ್ರಯ ಪತ್ರ ಕಾನೂನುಬದ್ಧವಾಗಿ ಇರಲಿಲ್ಲಮತ್ತು ಆಟೋ 3 ಭಾಗದಲ್ಲಿ ಮೂರು ಪ್ರತ್ಯೇಕ ನಂಬರ್ಗಳು ಇರುವುದು ಸಂಶಯಕ್ಕೆ ಕಾರಣವಾಗಿತ್ತು. ಹೀಗಾಗಿ ಗಾಡಿಯ ಮಾಲಿಕ ಫೈರೋಜ್ ಎನ್ನುವರ ವಿರುದ್ಧ ಸ್ಥಳೀಯ ಯುವಕರು ಪೊಲೀಸರಿಗೆ ದೂರು ನೀಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.