ETV Bharat / city

ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಅನ್ಯ ಕೋಮಿನ ಸಂಘಟನೆ ಭಾಗಿಯಾಗಿರುವ ಅನುಮಾನವಿದೆ: ಈಶ್ವರಪ್ಪ - ಬೆಡ್ ಬ್ಲಾಕಿಂಗ್ ಪ್ರಕರಣ

ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಅನ್ಯ ಕೋಮಿನ ಸಂಘಟನೆ ಭಾಗಿಯಾಗಿರುವ ಅನುಮಾನವಿದೆ. ಅಕ್ರಮವಾಗಿ ಬೆಡ್ ಬ್ಲಾಕ್ ಮಾಡಿಕೊಂಡಿರುವುದರಲ್ಲಿ ಹೆಚ್ಚು ಅವರೇ ಇರುವುದು ಕಾಣುತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

Shivamogga
ಸಚಿವ ಕೆ.ಎಸ್.ಈಶ್ವರಪ್ಪ
author img

By

Published : May 5, 2021, 1:56 PM IST

ಶಿವಮೊಗ್ಗ: ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಅನ್ಯ ಕೋಮಿನ ಸಂಘಟನೆ ಭಾಗಿಯಾಗಿರುವ ಅನುಮಾನವಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸಚಿವ ಈಶ್ವರಪ್ಪ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಅನ್ಯ ಕೋಮಿನ ಸಂಘಟನೆ ಭಾಗಿಯಾಗಿರುವ ಅನುಮಾನವಿದೆ. ಅಕ್ರಮವಾಗಿ ಬೆಡ್ ಬ್ಲಾಕ್ ಮಾಡಿಕೊಂಡಿರುವುದರಲ್ಲಿ ಹೆಚ್ಚು ಅವರೇ ಇರುವುದು ಕಾಣುತ್ತಿದೆ. ನಾನೇಕೆ ಇಲ್ಲಿ ಧರ್ಮವನ್ನು ತರುತ್ತಿದ್ದೇನೆ ಎಂದರೆ, ಕರ್ನಾಟಕದಲ್ಲಿ ಹಾಗೋ ಹೀಗೋ ಕೋವಿಡ್ ನಿರ್ವಹಣೆ ಮಾಡುತ್ತಿದ್ದೇವೆ.

ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಪ್ರಯತ್ನವನ್ನು ಕೆಲ ವ್ಯಕ್ತಿಗಳು ಮಾಡುತ್ತಿರಬಹುದು. ಆ ದಿಕ್ಕಿನಲ್ಲಿ ನಮ್ಮ ಸಂಸದ ತೇಜಸ್ವಿ ಸೂರ್ಯ, ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ ಅವರು ಪ್ರಯತ್ನ ಮಾಡಿ ಬೆಡ್ ಬ್ಲಾಕಿಂಗ್ ದಂಧೆಯ ಅಕ್ರಮವನ್ನು ಹೊರತಂದಿದ್ದಾರೆ. ಹಾಗಾಗಿ, ಇದರ ಹಿಂದೆ ಯಾರಿದ್ದಾರೆ? ಅನ್ನೋದು ತನಿಖೆ ನಂತರ ಹೊರಬರುತ್ತೆ.

ಹಾಗೇಯೇ ಎಲ್ಲಾ ಜಿಲ್ಲೆಗಳಲ್ಲಿ ಅಲರ್ಟ್ ಆಗಿರುವ ಪ್ರಯತ್ನ ನಡೆಸುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಈ ತರಹದ ಯಾವುದೇ ದಂಧೆ ಇಲ್ಲ ಎಂದು ತಿಳಿಸಿದರು.

ಓದಿ: ಆರೋಪಗಳಿಂದ ಬಹಳ ನೊಂದಿದ್ದೇನೆ: ಭಾವುಕರಾದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.