ಶಿವಮೊಗ್ಗ : ಸದಾಕಾಲ ರಾಜಕೀಯ ಜಂಜಾಟದಲ್ಲಿರುತ್ತಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಇಂದು ಕುಟುಂಬದವರೊಂದಿಗೆ ಅಯೋಧ್ಯೆ ಪ್ರವಾಸ ಕೈಗೊಂಡಿದ್ದಾರೆ.
ಉತ್ತರಪ್ರದೇಶದಲ್ಲಿರುವ ಅಯೋಧ್ಯೆ ಶ್ರೀರಾಮ ಮಂದಿರ ಕಾರ್ಯ ಶಾಲಾದಲ್ಲಿ ರಾಮ ಮಂದಿರದ ಕೆತ್ತನೆಯ ಸ್ಥಳ, ಅಯೋಧ್ಯೆಯಲ್ಲಿನ ಸರಯೂ ನದಿಯ ತೀರಕ್ಕೆ ಭೇಟಿ ನೀಡಿದ್ದಾರೆ. ಜತೆಗೆ ಅಯೋಧ್ಯೆಯ ಶ್ರೀ ಕನಕ ಭವನದಲ್ಲಿನ ಭಗವಾನ್ ಶ್ರೀಕೃಷ್ಣನ ದೇವಸ್ಥಾನ ಹಾಗೂ ಹನುಮಾನ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಕುಟುಂಬ ಸಮೇತ ಭೇಟಿ ನೀಡಿದ ಸಚಿವ ಈಶ್ವರಪ್ಪ ಅವರು, ರಾಮ ಮಂದಿರ ನಿರ್ಮಾಣಕ್ಕೆ ಬಳಸುವ ಕಲ್ಲಿನ ಕೆತ್ತನೆ ಮಾಡ್ತಿರುವ ಸ್ಥಳವೂ ಸೇರಿದಂತೆ ಇತರ ದೇವಾಲಯಗಳಿಗೆ ಭೇಟಿ ನೀಡಿ ದರುಶನ ಪಡೆದಿದ್ದಾರೆ. ಸದಾಕಾಲ ರಾಜಕೀಯದಲ್ಲಿರುವ ಸಚಿವರು ಕುಟುಂಬ ಸದಸ್ಯರೊಂದಿಗೆ ಪ್ರವಾಸ ಮಾಡುತ್ತಿದ್ದು, ಅವರಿಗೆ ಪತ್ನಿ ಜಯಲಕ್ಷ್ಮಿ, ಮಗ ಕಾಂತೇಶ್ ಹಾಗೂ ಮೊಮ್ಮಕ್ಕಳು ಸಾಥ್ ನೀಡಿದ್ದಾರೆ.