ETV Bharat / city

ಗ್ರಾಮ ಸಭೆಯಲ್ಲಿ ಸಚಿವರ ಎದುರೇ ಪಿಡಿಒರನ್ನ ತರಾಟೆಗೆ ತೆಗೆದುಕೊಂಡ ಮಹಿಳೆ - ಟಾಸ್ಕ್ ಪೂರ್ಸ್ ಸಮಿತಿ

ಕೋವಿಡ್​-19​​ ಕುರಿತು ಗ್ರಾಮೀಣ ಭಾಗದ ಜನರಿಗೆ ಸರಿಯಾಗಿ ಮನವರಿಕೆ ಮಾಡಿಕೊಡಬೇಕು. ಅಲ್ಲದೆ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ಟಾಸ್ಕ್ ಫೋರ್ಸ್ ಸಮಿತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು..

lady-villager-talked-against-pdo-infront-of-minister
ಈಶ್ವರಪ್ಪ ಟಾಸ್ಕ್ ಪೂರ್ಸ್ ಸಮಿತಿ ಸಭೆ
author img

By

Published : Jun 14, 2021, 6:25 PM IST

ಶಿವಮೊಗ್ಗ : ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ ಎಸ್ ಈಶ್ವರಪ್ಪನವರ ಸಮ್ಮುಖದಲ್ಲಿ ಗ್ರಾಮದ ಮಹಿಳೆಯೊಬ್ಬರು ಪಿಡಿಒರನ್ನು ತರಾಟೆಗೆ ತೆಗೆದುಕೊಂಡ ಘಟನೆ ಹಸೂಡಿ ಗ್ರಾಮದಲ್ಲಿ ನಡೆದಿದೆ. ಪಿಡಿಒ ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹಾಗೂ ಸ್ಯಾನಿಟೈಸರ್ ಮಾಡಿರುವ ಮಾಹಿತಿ ನೀಡುತ್ತಿದ್ದಂತಯೇ, ಸಭೆಗೆ ಬಂದಿದ್ದ ಮಹಿಳೆ ಎದ್ದು ನಿಂತು ಸಚಿವರಿಗೆ ತಪ್ಪು ಮಾಹಿತಿ ನೀಡಬೇಡಿ, ಸುಳ್ಳು ಹೇಳಬೇಡಿ ಎಂದು‌ ಏರು ಧ್ವನಿಯಲ್ಲಿ ಮಾತನಾಡಿದರು.

ಸಚಿವರ ಮುಂದೆಯೇ ಪಿಡಿಒರನ್ನು ತರಾಟೆಗೆ ತೆಗೆದುಕೊಂಡು ಗ್ರಾಮದ ಮಹಿಳೆ..

ಹಸೂಡಿ ಗ್ರಾಮ ಪಂಚಾಯತ್​ನಲ್ಲಿ ಇಂದು ಸಚಿವ ಈಶ್ವರಪ್ಪ ಟಾಸ್ಕ್ ಪೂರ್ಸ್ ಸಮಿತಿ ಸಭೆ ನಡೆಸಿದರು. ಈ ವೇಳೆ ಪಿಡಿಒ ಅವರು ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು, ಸ್ಯಾನಿಟೈಸರ್ ಮಾಡಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಂತಯೇ, ಸಭೆಗೆ ಬಂದಿದ್ದ ಮಹಿಳೆ ಎದ್ದು ನಿಂತು ಸಚಿವರಿಗೆ ತಪ್ಪು ಮಾಹಿತಿ ನೀಡಬೇಡಿ, ಪಾಸಿಟಿವ್ ಬಂದ ಮನೆಗೆ ಎಲ್ಲಿ ಸ್ಯಾನಿಟೈಸರ್ ಮಾಡಿದ್ದೀರಿ, ಫೋನ್ ಮಾಡಿ ಹೇಳಿದ್ರೂ ಸಹ ಮಾಡಿಲ್ಲ. ಸುಳ್ಳು ಹೇಳಬೇಡಿ ಎಂದು‌ ಏರು ಧ್ವನಿಯಲ್ಲಿ ಮಾತನಾಡಿದರು. ಇದಕ್ಕೆ ಸಚಿವರು‌ ಆಯ್ತು ಕುಳಿತುಕೊಳ್ಳಮ್ಮ ಎಂದು ಸಲಹೆ‌ ನೀಡಿದರು.

ನಂತರ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಸಮಸ್ಯೆಗಳನ್ನು ವಿವರಿಸಿದರು. ಈ ವೇಳೆ ಕೋವಿಡ್ ಪಾಸಿಟಿವ್ ಬಂದು ಗುಣಮುಖರಾದವರ ಹತ್ತಿರ ಬರಲು ಜನ ಹೆದರುತ್ತಾರೆ. ಹಾಗೇ ಕೆಲಸಕ್ಕೂ ಕರೆಯುತ್ತಿಲ್ಲ. ಇದರಿಂದ ಬಡ ವರ್ಗದವರಿಗೆ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಶಾ ಕಾರ್ಯಕರ್ತೆಯೊಬ್ಬರು ವಿವರಿಸಿದರು.

ಈ ಕುರಿತು ಸಚಿವರು ಪ್ರತಿಕ್ರಿಯೆ ನೀಡಿ, ಕೋವಿಡ್​​​ ಕುರಿತು ಗ್ರಾಮೀಣ ಭಾಗದ ಜನರಿಗೆ ಸರಿಯಾಗಿ ಮನವರಿಕೆ ಮಾಡಿಕೊಡಬೇಕು. ಅಲ್ಲದೆ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ಟಾಸ್ಕ್ ಫೋರ್ಸ್ ಸಮಿತಿಗೆ ಸೂಚಿಸಿದರು. ಸಭೆಯ ಬಳಿಕ ಗ್ರಾಮದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿಂದ ಮನರೇಗಾ ಯೋಜನೆಯಡಿ ಗದ್ದೆಯ ಕಾಲುವೆಯನ್ನ ಸ್ವಚ್ಛಗೊಳಿಸುವ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.