ಶಿವಮೊಗ್ಗ: ನಗರದ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಗುದ್ದಲಿ ಪೂಜೆ ನೆರವೇರಿಸಿದರು.
ನಗರದ ನವುಲೆಯ ಜ್ಯೋತಿ ನಗರದಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದ ರಸ್ತೆ, ಕೃಷಿ ನಗರದಲ್ಲಿ 20 ಲಕ್ಷದ ಚರಂಡಿ ಕಾಮಗಾರಿ, ಶುಭಮಂಗಳದ ಬಳಿ 75 ಲಕ್ಷದ ಕಾಮಗಾರಿ, ಕೆಂಚಪ್ಪ ಬಡಾವಣೆಯಲ್ಲಿ 80 ಲಕ್ಷ ರೂ. ಗಳ ಕಾಮಗಾರಿ, ಜೆ ಎಚ್ ಬಡಾವಣೆಯಲ್ಲಿ 45 ಲಕ್ಷ ರೂ. ಇಂಡಸ್ಟ್ರಿಯಲ್ ಏರಿಯಾದಲ್ಲಿ 58 ಲಕ್ಷ ರೂ. ಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳೀಧರ್, ಮಾಜಿ ಉಪ ಮೇಯರ್ ಚನ್ನಬಸಪ್ಪ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.