ಶಿವಮೊಗ್ಗ : ಸಾವಿರ ವರ್ಷಗಳು ಕಳೆದರೂ ಬೆಂಗಳೂರು ಹೇಗಿರಬೇಕು ಎಂಬ ಕಲ್ಪನೆಯೊಂದಿಗೆ ಆಡಳಿತ ನಡೆಸುವ ಮೂಲಕ ಅಭಿವೃದ್ಧಿ ಯೋಜನೆ ರೂಪಿಸಿದ ದೂರದೃಷ್ಟಿಯ ನಾಯಕ ಕೆಂಪೇಗೌಡರು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲಿ ಹಾಗೂ ಒಕ್ಕಲಿಗರ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವೈಭವೀಕರಣ ಜೀವನ ನಡೆಸದೆ ಸಾಮಾನ್ಯ ಜನರ ಮಧ್ಯೆ ಇದ್ದು ಸಾಮಾನ್ಯ ಜನರಿಗೆ ಪೂರಕವಾದ ಆಡಳಿತ ನಡೆಸಿದ ಜಗತ್ತಿನ ಹೆಮ್ಮೆಯ ಆಡಳಿತಗಾರ ಅಂದರೆ ಅದು ಕೆಂಪೇಗೌಡ, ಇವರು ದೂರದೃಷ್ಟಿ ಆಡಳಿತಗಾರ ಎಂದು ಸಚಿವರು ಹೇಳಿದರು.