ಶಿವಮೊಗ್ಗ: ಮತಾಂತರ ಆದವರು ಮೂಲ ಮತದ ಸೌಲಭ್ಯ ಪಡೆಯುವುದನ್ನು ತಡೆಯಲು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇತ್ತೀಚೆಗೆ ಮತಾಂತರ ಸಮಾಜದ ಕೆಳ ವರ್ಗದವರನ್ನು ಕಾಡುತ್ತಿದೆ. ದೇಶದ ಧಾರ್ಮಿಕ ನೆಲೆಗಟ್ಟನ್ನು ಹದಗೆಡಿಸುವ ಕಾರ್ಯ ನಡೆಯುತ್ತಿದೆ. ಧರ್ಮ ಪ್ರಚಾರ ಅಂದ್ರೆ ಅದು ಮತಾಂತರ ಅಲ್ಲ ಎಂದು ಕೋರ್ಟ್ ಹೇಳಿದೆ. ಮತಾಂತರ ಆಗಿಯೂ ಮೂಲ ಧರ್ಮದ ಸದುಪಯೋಗ ಪಡೆದುಕೊಳ್ಳುವಂತಾಗಿದೆ. ಇದರಿಂದ ಮತಾಂತರ ಆಗುವವರು ಡಿಸಿಗೆ ಅರ್ಜಿ ಸಲ್ಲಿಸಬೇಕು. ಆಮಿಷಕ್ಕೆ ಒಳಗಾಗಿ ಮತಾಂತರವಾದರೆ ಅವರಿಗೆ ಶಿಕ್ಷೆ ನೀಡಬೇಕು. ಬಲವಂತದ ಮತಾಂತರ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು ಹೇಳಿದರು.
'ಪ್ರಧಾನಿ ಮೋದಿ ಕೂಡ ಒಬಿಸಿಯವರು'
ಬಿಜೆಪಿ ಒಬಿಸಿಯನ್ನು ದೇಶ ಸೇವೆಗೆ ಬಳಸಿಕೊಳ್ಳಲಿದೆಯೇ ಹೊರತು ವೋಟ್ ಬ್ಯಾಂಕ್ ಆಗಿ ಮಾಡಿಕೊಳ್ಳುವುದಿಲ್ಲ. ಆದರೆ ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದ ಅವರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿರುವುದು ಬಿಟ್ಟರೆ ಅವರಿಗೆ ಏನೂ ಮಾಡಿಲ್ಲ. ಬಿಜೆಪಿ ಈಗ ಸರ್ವ ಪಕ್ಷವಾಗಿ ಮುಂದೆ ಹೋಗುತ್ತಿದೆ. ನಮ್ಮ ಪಕ್ಷ ಮೇಲ್ವರ್ಗದವರ ಪಕ್ಷ ಎಂದು ಹಿಂದೆ ಹೇಳುತ್ತಿದ್ದರು. ನಮ್ಮ ಪ್ರಧಾನಿ ಕೂಡ ಒಬಿಸಿಯವರು ಎನ್ನುವುದನ್ನು ಗಮನಿಸಬೇಕು ಎಂದು ಹೇಳಿದರು.
ಕಾರ್ಯಕಾರಿಣಿಯಲ್ಲಿ ರಾಜ್ಯ ಒಬಿಸಿ ಉಸ್ತುವಾರಿ ಕೆ.ಎಸ್.ಈಶ್ವರಪ್ಪ, ರಾಜ್ಯಾಧ್ಯಕ್ಷ ನೆ.ಲ.ನರೇಂದ್ರ ಬಾಬು, ಶಿವಮೊಗ್ಗ ಜಿಲ್ಲಾಧ್ಯಕ್ಷ ಮಾಲತೇಶ್, ಕಾರ್ಯದರ್ಶಿ ಯು.ಕೆ.ವೆಂಕಟೇಶ್ ಸೇರಿ ಇತರರು ಹಾಜರಿದ್ದರು.
ಇದನ್ನೂ ಓದಿ: ಕೋವಿಡ್ ಕಠಿಣ ನಿಯಮ ಕಾಂಗ್ರೆಸ್ಗೂ ಅನ್ವಯ : ಗೃಹ ಸಚಿವ ಆರಗ ಜ್ಞಾನೇಂದ್ರ