ETV Bharat / city

ಹೆಚ್.ಆರ್. ಕೇಶವಮೂರ್ತಿಗೆ ಪದ್ಮಶ್ರೀ ಪ್ರಶಸ್ತಿ.. ಗಮಕ ಕಲಾವಿದ ನಡೆದು ಬಂದ ಹಾದಿ.. - ಗಮಕ ಕಲಾವಿದ ಹೆಚ್ ಆರ್ ಕೇಶವಮೂರ್ತಿ

ರಾಜ್ಯವಲ್ಲದೇ ದೇಶ-ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರ ಗಮಕದಲ್ಲಿನ ಸಾಧನೆಗೆ ಕುಮಾರವ್ಯಾಸ ಪ್ರಶಸ್ತಿ, ರಾಜೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಇವರ ಅನೇಕ ಶಿಷ್ಯರು ಇಂದು ಗಮಕದಲ್ಲಿ ಸಾಧನೆ ಮಾಡುತ್ತಿದ್ದಾರೆ..

h r keshavamoorty got padma shri award
ಹೆಚ್ ಆರ್ ಕೇಶವಮೂರ್ತಿಗೆ ಪದ್ಮಶ್ರೀ
author img

By

Published : Jan 26, 2022, 11:55 AM IST

ಶಿವಮೊಗ್ಗ : ಖ್ಯಾತ ಗಮಕ ಕಲಾವಿದ ಹೆಚ್ ಆರ್ ಕೇಶವಮೂರ್ತಿ ಈ ಬಾರಿಯ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಇವರು ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ 1934ರ ಪೆಬ್ರವರಿ 22ರಂದು ಜನಿಸಿದರು.

ಇವರ ತಂದೆ ರಾಮಶಾಸ್ತ್ರಿಗಳು, ತಾಯಿ ಲಕ್ಷ್ಮಿದೇವಮ್ಮನವರು. ಇವರು ಬಾಲ್ಯದಲ್ಲಿಯೇ ಗಮಕ ಕಲೆಯನ್ನು ಕಲಿತವರು. ಇವರ ತಂದೆ ಹಾಗೂ ತಾಯಿ ಹಾಡುತ್ತಿದ್ದ ಪುರಾಣಗಳಿಂದ ಪ್ರೇರೇಪಿತರಾಗಿ ಗಮಕದ ಕಡೆ ಆಸಕ್ತಿಯನ್ನು ಹೊಂದಿದರು.

ತಮ್ಮ 16ನೇ ವಯಸ್ಸಿನಲ್ಲಿ ಹೊಸಹಳ್ಳಿ ಗ್ರಾಮದ ವೆಂಕಟೇಶಯ್ಯನವರ ಬಳಿ ಗಮಕ ವಾಚನವನ್ನು ಕಲಿಯಲು ಪ್ರಾರಂಭಿಸಿದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ರಾಗವಾಗಿ ಹಾಡುವುದನ್ನು ಕಲಿತುಕೊಂಡಿದ್ದರು. ಇವರು 100ಕ್ಕೂ ಹೆಚ್ಚು ವಿಭಿನ್ನ ರಾಗಗಳಲ್ಲಿ ವಾಚನ ಮಾಡುವುದರಿಂದ ಶತರಾಗಿ ಎಂಬ ಬಿರುದನ್ನು ಪಡೆದುಕೊಂಡರು.

ಇದನ್ನೂ ಓದಿ: ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಕನ್ನಡಿಗರಿಗೆ ಹೆಚ್​ಡಿಕೆ ಅಭಿನಂದನೆ

ರಾಜ್ಯವಲ್ಲದೇ ದೇಶ-ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರ ಗಮಕದಲ್ಲಿನ ಸಾಧನೆಗೆ ಕುಮಾರವ್ಯಾಸ ಪ್ರಶಸ್ತಿ, ರಾಜೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಇವರ ಅನೇಕ ಶಿಷ್ಯರು ಇಂದು ಗಮಕದಲ್ಲಿ ಸಾಧನೆ ಮಾಡುತ್ತಿದ್ದಾರೆ.

ಸಚಿವರು, ಸಂಸದರಿಂದ ಅಭಿನಂದನೆ : ಹೆಚ್.ಆರ್ ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದಕ್ಕೆ ಸಚಿವರಾದ ಕೆ.ಎಸ್.ಈಶ್ವರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಅಭಿನಂದಿಸಿದ್ದಾರೆ‌. ಇನ್ನೂ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದಕ್ಕೆ ಹೊಸಹಳ್ಳಿ-ಮತ್ತೂರು ಗ್ರಾಮದಲ್ಲಿ ಹರ್ಷ ಮುಗಿಲು ಮುಟ್ಟಿದೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.