ETV Bharat / city

ಸಾಗರದಲ್ಲಿ ನೆರೆ ಸಂತ್ರಸ್ತರಿಗಾಗಿ ಪಾದಯಾತ್ರೆ ಮೂಲಕ ನಿಧಿ ಸಂಗ್ರಹ

ರಾಜ್ಯದ ನೆರೆ ಸಂತ್ರಸ್ತರಿಗಾಗಿ ಸಾಗರ ತಾಲೂಕು ಆಡಳಿತ ವತಿಯಿಂದ ಪಾದಯಾತ್ರೆ ಮೂಲಕ ನಿಧಿ ಸಂಗ್ರಹಿಸಲಾಯಿತು. ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಸಂಘ ಸಂಸ್ಥೆಗಳ ಸದಸ್ಯರು ಮತ್ತು ತಾಲೂಕಿನ ಅಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Hiking by Fund-collecting for flood victims
author img

By

Published : Aug 22, 2019, 6:38 PM IST

ಶಿವಮೊಗ್ಗ: ಪ್ರವಾಹ ಸಂತ್ರಸ್ತರಿಗಾಗಿ ಸಾಗರ ತಾಲೂಕು ಆಡಳಿತ ವತಿಯಿಂದ ಪಾದಯಾತ್ರೆ ಮೂಲಕ ನಿಧಿ ಸಂಗ್ರಹಿಸಲಾಯಿತು. ಸಾಗರ ಉಪವಿಭಾಗಾಧಿಕಾರಿ ಕಚೇರಿಯ ಮುಂಭಾಗದಿಂದ ಬೆಳಗ್ಗೆ ಆರಂಭವಾಗಿದ್ದ ಈ ಪಾದಯಾತ್ರೆ ಮಧ್ಯಾಹ್ನದ ವೇಳೆಗೆ ಸಮಾಪ್ತಿಗೊಂಡಿತು.

ಶಾಸಕ ಹರತಾಳು ಹಾಲಪ್ಪ, ಎ.ಸಿ ದರ್ಶನ್, ವಿವಿಧ ಸಂಘಟನೆಗಳ ಸದಸ್ಯರು ಸೇರಿದಂತೆ ತಾಲೂಕು ಅಧಿಕಾರಿಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ‌ ಅಂಗಡಿ-ಮುಂಗಟ್ಟುಗಳಿಂದ ನಿಧಿ ಸಂಗ್ರಹಿಸಲಾಯಿತು.

ಪಾದಯಾತ್ರೆ ಮೂಲಕ ನಿಧಿ ಸಂಗ್ರಹ

ಕಳೆದ ವರ್ಷ ಕೊಡಗಿನ ಸಂತ್ರಸ್ತರಿಗಾಗಿ ಇದೇ ರೀತಿ ಪಾದಯಾತ್ರೆ ಮಾಡಲಾಗಿತ್ತು. ಸಾರ್ವಜನಿಕರು ಎ.ಸಿ ದರ್ಶನ್​ ಅವರನ್ನು ಭೇಟಿಯಾಗಿ ಪರಿಹಾರ ನೀಡಬಹುದು ಎಂದು ಶಾಸಕ ಹರತಾಳು ಹಾಲಪ್ಪ ಮನವಿ ಮಾಡಿದ್ದಾರೆ.

Intro:ಸಾಗರ ತಾಲೂಕು ಆಡಳಿತದಿಂದ ಪಾದಯಾತ್ರೆ ನಿಧಿ ಸಂಗ್ರಹ.

ಶಿವಮೊಗ್ಗ: ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಸಂತ್ರಸ್ತರಿಗಾಗಿ ನಿಧಿ ಸಂಗ್ರಹ ಮಾಡಲು ಸಾಗರ ತಾಲೂಕು ಆಡಳಿತ ವತಿಯಿಂದ ಪಾದಯಾತ್ರೆಯ ಮೂಲಕ ನಿಧಿ ಸಂಗ್ರಹ ಮಾಡಲಾಯಿತು. ಸಾಗರ ಪಟ್ಟಣದಲ್ಲಿ ಶಾಸಕ ಹರತಾಳು ಹಾಲಪ್ಪ, ಎಸಿ ದರ್ಶನ್, ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಸೇರಿದಂತೆ ತಾಲೂಕಿನ ಅಧಿಕಾರಿಗಳು ಪಾದಯಾತ್ರೆ ಮೂಲಕ ತೆರಳಿ ನಿಧಿ ಸಂಗ್ರಹ ಮಾಡಲಾಯಿತು.Body: ಸಾಗರ ಉಪವಿಭಾಗೀಯಧಿಕಾರಿ ಕಚೇರಿ ಯಿಂದ ಪ್ರಾರಂಭವಾದ ಪಾದಯಾತ್ರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ‌, ಅಂಗಡಿ- ಮುಗ್ಗಟ್ಟುಗಳಿಗೆ ತೆರಳಿ ನಿಧಿಯನ್ನು ಸಂಗ್ರಹ ಮಾಡಲಾಯಿತು. ನಿಧಿ ಸಂಗ್ರಹಕ್ಕಾಗಿ ಆಟೋದಲ್ಲಿ ಪ್ರಚಾರ ನಡೆಸುತ್ತಾ ನಿಧಿ ಸಂಗ್ರಹ ಮಾಡಲಾಯಿತು. ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಪರಿಹಾರ ನಿಧಿ ಸಂಗ್ರಹ ಮಾಡಲಾಯಿತು. Conclusion: ಎಸಿ ದರ್ಶನ್ ನವರ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ನೆರೆ ಪರಿಹಾರ ಸಂಗ್ರಹ ಮಾಡಲಾಯಿತು. ಸಂಘಟನೆಗಳು ಸೇರಿದಂತೆ ಬೇರೆ ಬೇರೆಯಾಗಿ ನಿಧಿ ಸಂಗ್ರಹ ಮಾಡಿದಾಗ ಜನರಿಗೆ ತೂಂದರೆ ಆಗಬಾರದೆಂದು ಎಸಿ ರವರ ನೇತೃತ್ವದಲ್ಲಿ ನಿಧಿ ಸಂಗ್ರಹ ಮಾಡಲಾಗಿದೆ. ಕಳೆದ ವರ್ಷ ಕೊಡಗು ನಿಧಿಗಾಗಿ ಇದೇ ರೀತಿ ಪಾದಯಾತ್ರೆ ಮಾಡಲಾಗಿತ್ತು ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.