ETV Bharat / city

ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನಕ್ಕೆ ಸಂತಾಪ ಸಂದೇಶ ಕಳುಹಿಸಿದ ಮಾಜಿ ಪ್ರಧಾನಿ ಹೆಚ್​ಡಿಡಿ

ನಾನು ಬೆಳೆಸಿದ ಯುವಕ. ಬದುಕನ್ನು ಅರಸಿಕೊಂಡು ಭದ್ರಾವತಿಗೆ ಬಂದು ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಸೇರಿ ಕಾರ್ಮಿಕ ಹೋರಾಟಗಾರರಾಗಿ, ಸಾರ್ವಜನಿಕ ಬದುಕಿನ ವ್ಯಕ್ತಿಯಾಗಿ, ಬಡವರ ನಾಯಕರಾಗಿ ರೂಪುಗೊಂಡ ರೀತಿ ಅಸಾದೃಶ್ಯವಾದದ್ದು ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು, ಮಾಜಿ ಶಾಸಕ ಅಪ್ಪಾಜಿಗೌಡ ಅವರ ಬಾಂಧವ್ಯವನ್ನು ಸಂತಾಪ ಸಂದೇಶದ ಮೂಲಕ ನೆನೆಪಿಸಿಕೊಂಡಿದ್ದಾರೆ.

former-prime-minister-hd-devegowda-condolence-letter-to-appaji-gowda-death
ಮಾಜಿ ಪ್ರಧಾನಿ ಹೆಚ್​ಡಿಡಿ
author img

By

Published : Sep 13, 2020, 7:30 PM IST

ಶಿವಮೊಗ್ಗ: ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ ಅವರ ಪುಣ್ಯಸ್ಮರಣೆ ದಿನದ ಕಾರ್ಯಕ್ರಮಕ್ಕೆ ಸಂತಾಪ ಸಂದೇಶ ಕಳುಹಿಸಿರುವ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಹಿಂದಿನ ದಿನಗಳನ್ನು ನೆನೆದಿದ್ದಾರೆ.

ಬಡವರ ನಾಯಕ ಅಪ್ಪಾಜಿ ಗೌಡರು ನನ್ನ ಕಣ್ಣ ಮುಂದೆ, ನಾನು ಬೆಳೆಸಿದ ಯುವಕ. ಬದುಕನ್ನು ಅರಸಿಕೊಂಡು ಭದ್ರಾವತಿಗೆ ಬಂದು ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಸೇರಿ ಕಾರ್ಮಿಕ ಹೋರಾಟಗಾರರಾಗಿ, ಸಾರ್ವಜನಿಕ ಬದುಕಿನ ವ್ಯಕ್ತಿಯಾಗಿ, ಬಡವರ ನಾಯಕರಾಗಿ ರೂಪುಗೊಂಡ ರೀತಿ ಅಸಾದೃಶ್ಯವಾದದ್ದು.

1989ರಲ್ಲಿ ನನ್ನೊಂದಿಗೆ ಗಟ್ಟಿಯಾಗಿ ಗುರುತಿಸಿಕೊಂಡು ಬಂದ ಅಪ್ಪಾಜಿ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು. 1994ರಲ್ಲಿ ಭದ್ರಾವತಿಯ ಕ್ಷೇತ್ರದಿಂದ ಪಕ್ಷೇತರ ಶಾಸಕನಾಗಿ ಆರಿಸಿಬಂದ ಅಪ್ಪಾಜಿ ನಾನು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದ ಆ ರಾಜಕೀಯ ಸನ್ನಿವೇಶದಲ್ಲಿ ನನ್ನ ಅಭಿಮಾನಿ ವಲಯದಲ್ಲಿ ಸ್ಪಷ್ಟವಾಗಿ ಗುರುತಿಸಿಕೊಂಡವರು.

Former Prime Minister HD Devegowda condolence letter to Appaji Gowda Death
ಸಂತಾಪ ಸಂದೇಶ ಪ್ರತಿ

ಭದ್ರಾವತಿ ಉಕ್ಕಿನ ಕಾರ್ಖಾನೆಯನ್ನು ಭಾರತ ಉಕ್ಕು ಪ್ರಾಧಿಕಾರಕ್ಕೆ ವಹಿಸಿಕೊಟ್ಟು ಕಾರ್ಮಿಕರಿಗೆ ಭದ್ರತೆ ನೀಡಬೇಕೆಂಬ ನಿರ್ಧಾರವನ್ನು ನಾನು ಪ್ರಧಾನಿಯಾಗಿ ಮಾಡಿದ್ದಕ್ಕೆ ಅಪ್ಪಾಜಿಯು ನಡೆಸಿದ ಹೋರಾಟ, ಅವರು ನನ್ನ ಮೇಲೆ ಬೀರಿದ ಒತ್ತಾಸೆಯೇ ಕಾರಣ. ಮೈಸೂರು ಪೇಪರ್ ಮಿಲ್ (ಎಂಪಿಎಂ) ಕಾರ್ಮಿಕರ ವಿಷಯದಲ್ಲಿಯು ಅಷ್ಟೆ.

ರಾಜಕೀಯ ಕ್ಷೇತ್ರದಲ್ಲಿ ಹಣವನ್ನು ಮಾಡಿಕೊಳ್ಳದೇ, ಬಡವರು, ನಿರ್ಗತಿಕರು, ರೋಗಿಗಳು, ಅಸಹಾಯಕರಿಗೆ ಅವರವರ ಪರಿಸ್ಥಿತಿಗೆ ತಕ್ಕಂತೆ ಕೊಡುಗೈ ಸಹಾಯ ಮಾಡುತ್ತಿದ್ದ ಅಪ್ಪಾಜಿಯನ್ನು ಭದ್ರಾವತಿಯ ಎಲ್ಲ ವರ್ಗದ ಎಲ್ಲ ಜನರು ಪ್ರೀತಿಸುತ್ತಿದ್ದರು. ಭದ್ರಾವತಿಯ ಕೆಎಸ್​ಆರ್​ಟಿಸಿ ಬಸ್‌ ನಿಲ್ದಾಣವಂತೂ ಅವರ ಹೆಸರನ್ನು ಅಜರಾಮರಗೊಳಿಸುವಂತಹುದು.

2013 ರಲ್ಲಿ ನನ್ನ ಪಕ್ಷದ ಚಿನ್ನೆಯಲ್ಲಿ ಭಾರಿ ಬಹುಮತದಿಂದ ಆರಿಸಿ ಬಂದ ಅಪ್ಪಾಜಿ ನನ್ನ ಬಳಿ ಸ್ವಾರ್ಥಕ್ಕಾಗಿ ಏನನ್ನು ಕೇಳಿದವರಲ್ಲ. ಇಂತಹ ಹೃದಯ ಶ್ರೀಮಂತಿಕೆಯ ವ್ಯಕ್ತಿ ಅಕಾಲಿಕವಾಗಿ ಸ್ವಲ್ಪ ಉದಾಸೀನದಿಂದ ನಮ್ಮನ್ನು ಅಗಲಿದುದು ನಿಜಕ್ಕೂ ದುರಂತವೇ ಸರಿ.

ಇಂದು ಅವರ ಆತ್ಮಕ್ಕೆ ಶಾಂತಿ ಕೋರುವ ಸಂದರ್ಭದಲ್ಲಿ ನಾನು ಭದ್ರಾವತಿಯ ಎಲ್ಲ ಅಪ್ಪಾಜಿ ಅಭಿಮಾನಿಗಳಲ್ಲಿ ಕೋರುವುದೆಂದರೆ ಆ ಅಪ್ಪಾಜಿಯವರು ಹಾಕಿಕೊಟ್ಟ ಮಾರ್ಗ, ಬೆಳೆಸಿದ ನಾಯಕರು, ಕಾರಕರ್ತರು ಗಟ್ಟಿಯಾಗಿ ನಿಂತು ಆದರ್ಶಗಳನ್ನು ಸದೃಢಗೊಳಿಸಬೇಕೆಂದು, ಹಾಗೂ ಅವರ ಕುಟುಂಬ ವರ್ಗದ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಅಪ್ಪಾಜಿ ಆತ್ಮಕ್ಕೆ ಶಾಂತಿ, ಸದ್ಧತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸಂದೇಶ ರವಾನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.