ETV Bharat / city

ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲು: ಸಾಗರದಲ್ಲಿ ಪರ-ವಿರೋಧ ಪ್ರತಿಭಟನೆ - ಪ್ರಧಾನಿ ವಿರುದ್ದ ಅವಹೇಳನ

ಪಿಎಂ ಕೇರ್ಸ್​ ಫಂಡ್​ ಬಗ್ಗೆ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷೆ‌ ಸೋನಿಯಾ ಗಾಂಧಿ ವಿರುದ್ಧ ದಾಖಲಾಗಿರುವ ಎಫ್‍ಐಆರ್ ವಿಚಾರವಾಗಿ ಸಾಗರದಲ್ಲಿ ಪರ ಹಾಗೂ ವಿರೋಧದ ಪ್ರತಿಭಟನೆ ನಡೆದಿದೆ.

FIR filed against Sonia Gandhi, pro-opposition protests
ಸೋನಿಯಾ ಗಾಂಧಿ ವಿರುದ್ದ ದಾಖಲಾಗಿರುವ ಎಫ್ಐಆರ್ ಪ್ರಕರಣ, ಸಾಗರದಲ್ಲಿ ಪರ-ವಿರೋಧ ಪ್ರತಿಭಟನೆ
author img

By

Published : May 22, 2020, 8:51 PM IST

ಶಿವಮೊಗ್ಗ: ಎಐಸಿಸಿ ಅಧ್ಯಕ್ಷೆ‌ ಸೋನಿಯಾ ಗಾಂಧಿ ವಿರುದ್ಧ ದಾಖಲಾಗಿರುವ ಎಫ್‍ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರದಲ್ಲಿ ಪರ ಹಾಗೂ ವಿರೋಧದ ಪ್ರತಿಭಟನೆ ನಡೆದವು.

ಸಾಗರ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ತಕ್ಷಣ ಎಫ್‍ಐಆರ್ ರದ್ದುಮಾಡಬೇಕು. ಪೊಲೀಸ್​ ಅಧಿಕಾರಿ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿಕೊಂಡಂತೆ ಕಾಣುತ್ತದೆ. ರಾಜ್ಯ ಸರ್ಕಾರ ದೂರು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪ್ರತಿಭಟನೆ ಮಗಿದ ಬಳಿಕ ದೇಶಭಕ್ತ ವಕೀಲರ ಸಂಘ ಪ್ರತಿಭಟನೆ ನಡೆಸಿತು. 'ಕಾಂಗ್ರೆಸ್​ನವರು ಪ್ರತಿಭಟನೆ ನಡೆಸಿ ಸೋನಿಯಾ ಗಾಂಧಿ ಅವರ ಪ್ರಕರಣದ ತನಿಖಾ ಅಧಿಕಾರಿಯ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಂವಿಧಾನದಲ್ಲಿ ನಂಬಿಕೆ ಇರುವ ವಕೀಲ ಪ್ರವೀಣ್ ಅವರು ಪ್ರಧಾನಿ ವಿರುದ್ಧದ ಅವಹೇಳನಕಾರಿ ಸಂಬಂಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಬೇಕು' ಎಂದು ಆಗ್ರಹಿಸಿ ಎಸಿ ಅವರಿಗೆ ವಕೀಲರ ಸಂಘ ಮನವಿ ಸಲ್ಲಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.