ETV Bharat / city

ಯಡಿಯೂರಪ್ಪ, ಬಿ ಎಲ್ ಸಂತೋಷ್ ರಾಜ್ಯದ ಜೋಡೆತ್ತುಗಳಿದ್ದಂತೆ: ಕೆ ಎಸ್ ಈಶ್ವರಪ್ಪ - ಈಟಿವಿ ಭಾರತ್​ ಕನ್ನಡ

ಸಾರ್ವಕರ್ ಫ್ಲೆಕ್ಸ್​ ಕಿತ್ತು ಹಾಕಿದ ಅನ್ಯಕೋಮಿನವರಿಗೆ ಕಾಂಗ್ರೆಸ್​ನಿಂದ ನೇರ ಬೆಂಬಲ ಇದೆ ಎಂದು ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದರು.

eshwarappa
ಕೆ ಎಸ್ ಈಶ್ವರಪ್ಪ
author img

By

Published : Aug 17, 2022, 9:54 PM IST

ಶಿವಮೊಗ್ಗ: ಯಡಿಯೂರಪ್ಪ ಹಾಗೂ ಬಿ ಎಲ್ ಸಂತೋಷ್ ಇಬ್ಬರೂ ರಾಜ್ಯದ ಬಿಜೆಪಿಯ ಜೋಡೆತ್ತುಗಳಿದ್ದಂತೆ. ಅವರು ಕೇಂದ್ರ ಸಂಸದೀಯ ಹಾಗೂ ಚುನಾವಣಾ ಸಮಿತಿಗೆ ಆಯ್ಕೆ ಆಗಿರುವುದಕ್ಕೆ ಅಭಿನಂದನೆಗಳು. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕೇಂದ್ರ ನಡೆ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಅಭಿಪ್ರಾಯಿಸಿದರು.

ಯಡಿಯೂರಪ್ಪ ಹಾಗೂ ಸಂತೋಷ್ ರಾಜ್ಯದ ಜೋಡೆತ್ತುಗಳಿದ್ದಂತೆ

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಬಗ್ಗೆ ಕೇಂದ್ರ ವರಿಷ್ಟರು ನಿರ್ಣಯ ತೆಗೆದುಕೊಳ್ಳುತ್ತಾರೆ. ಯಡಿಯೂರಪ್ಪನವರು ಯಾವತ್ತೂ ಪ್ರವಾಸ ನಿಲ್ಲಿಸಿಲ್ಲ. ಈಗ ಮತ್ತೆ ಸದಸ್ಯರಾದ ಮೇಲೆ ಪ್ರವಾಸ ಕೈಗೊಳ್ಳುತ್ತಾರೆ. ಅವರ ಜೊತೆ ನಾವೂ ಪ್ರವಾಸ ಮಾಡುತ್ತೇವೆ ಎಂದರು.

ಚಿಕ್ಕಬಳ್ಳಾಪುರದಲ್ಲಿಯೇ ಸಾಧನಾ ಸಮಾವೇಶ: ಕಳೆದ ತಿಂಗಳು ಮುಂದೂಡಲ್ಪಟ್ಟಿದ್ದ ಸಾಧನಾ ಸಮಾವೇಶ ಮತ್ತೆ ಅದೇ ಚಿಕ್ಕಬಳ್ಳಾಪುರದಲ್ಲಿಯೇ ನಡೆಯಲಿದೆ. ನಾನು ನಿನ್ನೆ ಸಿಎಂ ಬಸವರಾಜ್ ಬೊಮ್ಮಯಿ ಅವರನ್ನು ಭೇಟಿ ಮಾಡಿ ಬಂದಿದ್ದೇನೆ ಎಂದು ತಿಳಿಸಿದರು.

ಫ್ಲೆಕ್ಸ್​ ಕಿತ್ತವರಿಗೆ ಕಾಂಗ್ರೆಸ್​ ಬೆಂಬಲ: ಸಾರ್ವಕರ್ ಫ್ಲೆಕ್ಸ್​ ಕಿತ್ತು ಹಾಕಿದ ಅನ್ಯಕೋಮಿನವರಿಗೆ ಕಾಂಗ್ರೆಸ್​ನಿಂದ ನೇರ ಬೆಂಬಲ ಇದೆ. ಗಲಭೆಯ ಹಿಂದೆ ಕಾಂಗ್ರೆಸ್​ ಇದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಈಶ್ವರಪ್ಪ ಆರೋಪಿಸಿದರು.

ಇದನ್ನೂ ಓದಿ : ಸಂಸದೀಯ ಮಂಡಳಿಯಲ್ಲಿ ಬಿಎಸ್​ವೈಗೆ ಸ್ಥಾನ: ಪಕ್ಷ, ಸರ್ಕಾರದ ಹುಮ್ಮಸ್ಸು ಇಮ್ಮಡಿ ಎಂದ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.