ETV Bharat / city

ಬಿಎಸ್​ವೈ ನಾಯಕತ್ವಕ್ಕೆ ಅಡ್ಡಿಪಡಿಸಿದ್ರೆ, ಅದು ಕೋವಿಡ್​ಗಿಂತ ಅಪಾಯಕಾರಿಯಾಗುತ್ತದೆ: ಬೆಕ್ಕಿನ ಕಲ್ಮಠ ಶ್ರೀ

ಕರ್ನಾಟಕಕ್ಕೆ ಎಂತಹ ನಾಯಕತ್ವ ಬೇಕು ಅಂತ ರಾಜ್ಯದ ಜನತೆ ನಿರ್ಧರಿಸಬೇಕಿದೆ. ಯಡಿಯೂರಪ್ಪ ನಾಯಕತ್ವಕ್ಕೆ ಅಡ್ಡಿಪಡಿಸಿದರೆ, ತಮ್ಮ ತಲೆಯ ಮೇಲೆ ತಾವೇ ಕಲ್ಲು ಹಾಕಿಕೊಂಡಂತೆ ಎಂದು ಬೆಕ್ಕಿನ ಕಲ್ಮಠದ ಶ್ರೀಗಳು ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದರು.

author img

By

Published : Jun 12, 2021, 3:08 PM IST

Shivamogga
ಶಿವಯೋಗಿ ಮಠದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

ಶಿವಮೊಗ್ಗ: ಯಾರು ಸಹ ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡಬಾರದು. ಹಾಗೇನಾದರೂ ಆದ್ರೆ, ಅದು ಕೋವಿಡ್​ಗಿಂತ ಅಪಾಯಕಾರಿಯಾಗುತ್ತದೆ ಎಂದು ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿಯ ಶಿವಯೋಗಿ ಮಠದಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಎಂತಹ ನಾಯಕತ್ವ ಬೇಕು ಅಂತ ರಾಜ್ಯದ ಜನತೆ ನಿರ್ಧರಿಸಬೇಕಿದೆ. ನಾಯಕತ್ವಕ್ಕೆ ಯಾರು ಅಡ್ಡಿಪಡಿಸಬಾರದು. ಯಡಿಯೂರಪ್ಪ ನಾಯಕತ್ವಕ್ಕೆ ಅಡ್ಡಿಪಡಿಸಿದರೆ, ತಮ್ಮ ತಲೆಯ ಮೇಲೆ ತಾವೇ ಕಲ್ಲು ಹಾಕಿಕೊಂಡಂತೆ ಎಂದು ಹೇಳಿದರು.

ಯಡಿಯೂರಪ್ಪ ಸಿಎಂ ಆಗುತ್ತಲೇ ಪ್ರವಾಹ ಬಂತು. ಆಗ ಯಡಿಯೂರಪ್ಪ ಏಕಾಂಗಿಯಾಗಿ ಹೋರಾಟ ನಡೆಸಿದ್ದಾರೆ. ಜೊತೆಗೆ ಕೋವಿಡ್ ಮಹಾಮಾರಿಯನ್ನು ಅತ್ಯಂತ ಸಮರ್ಥವಾಗಿ ಎದುರಿಸುತ್ತಿದ್ದಾರೆ. ಇದರಿಂದ ಈ ಸಂದರ್ಭದಲ್ಲಿ ಯಾರು ಸಹ ನಾಯಕತ್ವದ ಬಗ್ಗೆ ಮಾತನಾಡಬಾರದು. ಅದು ಕೋವಿಡ್​ಕ್ಕಿಂತ ಅಪಾಯಕಾರಿ ಆಗುತ್ತದೆ.
ಅವರ ನಾಯಕತ್ವಕ್ಕೆ ಯಾವುದೇ ಅಡೆತಡೆಗಳನ್ನು ತರಬಾರದು. ಭಗವಂತ ಇನ್ನಷ್ಟು‌ ಅವರಿಗೆ ಆಯುಷ್, ಆರೋಗ್ಯ ನೀಡಲಿ‌. ಅವರ ಸೇವೆ ಇನ್ನಷ್ಟು ನಿರಂತರವಾಗಿ ನಡೆಯಲಿ ಎಂದರು. ಯಡಿಯೂರಪ್ಪ ಅವರ ಆಸೆಗಳನ್ನು ಅವರ ಪುತ್ರ ರಾಘವೇಂದ್ರ ಈಡೇರಿಸುತ್ತಿದ್ದಾರೆ. ಯಡಿಯೂರಪ್ಪ ನಿತ್ಯ ಒಂದಲ್ಲಾ ಒಂದು ಕಡೆ ಭೇಟಿ ನೀಡುತ್ತಿದ್ದಾರೆ.

ಯಡಿಯೂರಪ್ಪ ನೆನಪಿಸಿಕೊಂಡ್ರೆ, ಜಿಲ್ಲೆಗೆ ಇನ್ನಷ್ಟು ಕೆಲಸಗಳಿವೆ. ಇನ್ನೂ ಇದಾಗಬೇಕು, ಅದಾಗಬೇಕು ಎಂದೆನ್ನಿಸುತ್ತದೆ ಎಂದರು.

ಇದನ್ನೂ ಓದಿ: ‘ಧರಣಿ ಮಂಡಲ ಮಧ್ಯದೊಳಗೆ’ ಪಂಚಭೂತಗಳಲ್ಲಿ ಲೀನರಾದ ಸಿದ್ಧಲಿಂಗಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.