ಶಿವಮೊಗ್ಗ: ಜಿಲ್ಲಾ ವರದಿಗಾರರು ಸೇರಿದಂತೆ ಪತ್ರಕರ್ತರಿಗೆ ಇಂದು ಜಿಲ್ಲಾ ಆರೋಗ್ಯ ಇಲಾಖೆಯು ಆರೋಗ್ಯ ತಪಾಸಣೆ ಹಾಗೂ ಸ್ವಾಬ್ ಸಂಗ್ರಹ ನಡೆಸಿದೆ.
ಮೆಗ್ಗಾನ್ ಭೋದನಾಸ್ಪತ್ರೆಯಲ್ಲಿ ನಡೆದ ಸ್ವಾಬ್ ಸಂಗ್ರಹದಲ್ಲಿ ಬೆಳಗ್ಗೆ ಹಾಗೂ ಮಧ್ಯಾಹ್ನ ಸೇರಿ ಸುಮಾರು 40 ಜನರ ಸ್ವಾಬ್ ಸಂಗ್ರಹ ಮಾಡಲಾಗಿದೆ. ಪತ್ರಕರ್ತರ ಸ್ವಾಬ್ ಸಂಗ್ರಹ ಇಂದು ಮತ್ತು ನಾಳೆ ನಡೆಯಲಿದ್ದು, ವರದಿ ನಾಳೆ ಲಭ್ಯವಾಗಲಿದೆ. ಸಂಗ್ರಹಕ್ಕೂ ಮುನ್ನ ಆರೋಗ್ಯದ ಸಂಪೂರ್ಣ ಮಾಹಿತಿ ಪಡೆದ ಆರೋಗ್ಯ ಇಲಾಖೆಯ ಸಿಬ್ಬಂದಿ ಆನ್ ಲೈನ್ ನಲ್ಲಿ ಅಪ್ಲಿಕೇಷನ್ ತುಂಬಿ ಕೊಂಡು ನಂತರ ಸ್ವಾಬ್ ಸಂಗ್ರಹ ಮಾಡಿದರು.
ಬೆಂಗಳೂರಿನಲ್ಲಿ ಪತ್ರಕರ್ತರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಯ ಪತ್ರಕರ್ತರ ಸ್ವಾಬ್ ಸಂಗ್ರಹ ನಡೆಸಲು ಸೂಚಿಸಿದೆ.