ಶಿವಮೊಗ್ಗ : ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ವಿಡಿಯೋ ಹಾಗೂ ಸಾಕ್ಷಿಗಳ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಗಲಭೆ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದು ಬರುತ್ತಿದೆ. ಆದಷ್ಟು ಬೇಗ ಎಲ್ಲರನ್ನೂ ದಸ್ತಗಿರಿ ಮಾಡಲಾಗುವುದು. ಅಂದು ನಡೆದ ಎಲ್ಲವೂ ನಮ್ಮ ತನಿಖೆಗೆ ಒಳಪಟ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುಪಿಯಲ್ಲಿ ಧಂಗೆಗಳಾದಾಗ ಕಠಿಣ ಕ್ರಮಕೈಗೊಂಡಿದ್ದರು. ಅಲ್ಲಿಯ ಪರಿಸ್ಥಿತಿ ಆಧರಿಸಿ ಕ್ರಮ ಕೈಗೊಂಡಿದ್ದರು. ಆದರೆ, ನಾವು ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಹಿಂದೆ ಡಿಜೆಹಳ್ಳಿ, ಕೆಜಿಹಳ್ಳಿ ಗಲಭೆಯಾದಾಗ ಕಠಿಣ ಕ್ರಮಕೈಗೊಂಡಿದ್ದೇವೆ. ಈ ಪ್ರಕರಣದಲ್ಲಿ ರಿಕವರಿ ಕಮಿಷನ್ ನೇಮಿಸಿದ್ದೇವೆ. ಗಲಭೆ ಮಾಡಿದವರಿಗೆ ತಕ್ಕ ಪಾಠವಾಗಿದೆ. ಪ್ರಚೋದನೆ ಮಾಡಿದಾಗ ತಕ್ಕ ಪಾಠ ಕಲಿಸುವ ಕೆಲಸವಾಗಿದೆ ಎಂದರು.
ಇದನ್ನೂ ಓದಿ: ಶೃಂಗೇರಿ ಆಸ್ಪತ್ರೆಯಿಲ್ಲದ ಊರು, ದಯವಿಟ್ಟು ನಿಧಾನವಾಗಿ ಚಲಿಸಿ : ಸಿಎಂಗೆ ವಿಭಿನ್ನ ಸ್ವಾಗತ