ETV Bharat / city

ಆಶಾ ಕಾರ್ಯಕರ್ತೆಯರಿಗೆ ಉಡಿ ತುಂಬಿ ಅಭಿನಂದಿಸಿದ ಬಂಗಾರಪ್ಪ ಫೌಂಡೇಶನ್ - ಆಶಾ ಕಾರ್ಯಕರ್ತೆಯರಿಗೆ ಉಡಿ ತುಂಬಿ ಅಭಿನಂದನೆ

ಕೊರೊನಾ ಹತೋಟಿಗೆ ಹಗಲಿರುಳು ಶ್ರಮಿಸುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ನೀಡುತ್ತಿರುವ ಗೌರವಧನ ಹೆಚ್ಚಿಸಬೇಕು. ಅಲ್ಲದೆ ಇವರನ್ನು ಕಾಯಂ ಮಾಡಿಕೊಳ್ಳಬೇಕು ಎಂದು ಬಂಗಾರಪ್ಪ‌ ಫೌಂಡೇಶನ್ ಆಗ್ರಹಿಸಿದೆ.

Bangarappa Foundation congratulates the Asha activists
ಆಶಾ ಕಾರ್ಯಕರ್ತೆಯರಿಗೆ ಉಡಿ ತುಂಬಿ ಅಭಿನಂದನೆ ಹೇಳಿದ ಬಂಗಾರಪ್ಪ ಫೌಂಡೇಶನ್
author img

By

Published : Aug 14, 2020, 10:05 AM IST

Updated : Aug 14, 2020, 11:42 AM IST

ಶಿವಮೊಗ್ಗ: ದಿವಂಗತ ಮಾಜಿ ಸಿಎಂ ಎಸ್.ಬಂಗಾರಪ್ಪ ಫೌಂಡೇಶನ್ ವತಿಯಿಂದ ಸೊರಬ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಉಡಿ ತುಂಬಿ ಅಭಿನಂದನೆ ಸಲ್ಲಿಸಲಾಯಿತು.

ಆಶಾ ಕಾರ್ಯಕರ್ತೆಯರಿಗೆ ಉಡಿ ತುಂಬಿ ಅಭಿನಂದಿಸಿದ ಬಂಗಾರಪ್ಪ ಫೌಂಡೇಶನ್

ಕೊರೊನಾ ಹಾವಳಿಯಲ್ಲಿ ತಮ್ಮ ಜೀವವನ್ನೆ ಪಣಕ್ಕಿಟ್ಟು ಕೊರೊನಾ ಹತೋಟಿಗೆ ಹಗಲು ರಾತ್ರಿ ಹೋರಾಟ ನಡೆಸುತ್ತಿರುವವರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಬಂಗಾರಪ್ಪ ಫೌಂಡೇಶನ್ ಸೊರಬದಲ್ಲಿ ಕಾರ್ಯಕ್ರಮ ನಡೆಸಿ, ಆಶಾ ಕಾರ್ಯಕರ್ತೆಯರಿಗೆ ಉಡಿ ತುಂಬಿ ಧನ್ಯವಾದ ಸಲ್ಲಿಸಿದೆ.

ಆಶಾ ಕಾರ್ಯಕರ್ತೆಯರಿಗೆ ಗೌರವಪೂರ್ವಕವಾಗಿ ಉಡಿ ತುಂಬಿಸಲಾಯಿತು. ಈ ವೇಳೆ ಅವರಿಗೆ ಸೀರೆ ಹಾಗೂ ಛತ್ರಿ ನೀಡಲಾಯಿತು. ಕೊರೊನಾ ಹತೋಟಿಗೆ ಹಗಲಿರುಳು ಶ್ರಮಿಸುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ನೀಡುತ್ತಿರುವ ಗೌರವಧನ ಹೆಚ್ಚಿಸಬೇಕು. ಅಲ್ಲದೆ ಇವರನ್ನು ಕಾಯಂ ಮಾಡಿಕೊಳ್ಳಬೇಕು ಎಂದು ಬಂಗಾರಪ್ಪ‌ ಫೌಂಡೇಶನ್ ಆಗ್ರಹಿಸಿದೆ.

ಈ ವೇಳೆ ಸೊರಬ ಜೆಡಿಎಸ್ ಬ್ಲಾಕ್‌ನ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಜೆಡಿಎಸ್ ವಕ್ತಾರ ಎಂ.ಡಿ.ಶೇಖರ್, ಪಟ್ಟಣ ಪಂಚಾಯತ್ ಸದಸ್ಯ ಪ್ರಸನ್ನ ಕುಮಾರ್, ಫೌಂಡೇಶನ್​​ನ ಸೈಯದ್ ಅನ್ಸರ್, ನಾಗರಾಜ್ ಜೈನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Last Updated : Aug 14, 2020, 11:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.