ಶಿವಮೊಗ್ಗ: ಕೊರೊನಾದಿಂದ ದೂರವಿರಿ ಎಂದು ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡುತ್ತಿದ್ದ ವ್ಯಕ್ತಿ ಕೋವಿಡ್ಗೆ ಬಲಿಯಾಗಿದ್ದಾನೆ.
ಶಿವಮೊಗ್ಗದ ಸಂಸ್ಕೃತಿ ಫೌಂಡೇಶನ್ ನಡೆಸುತ್ತಿದ್ದ ಶರಣ್ ತನ್ನ ಫೌಂಡೇಶನ್ ವತಿಯಿಂದ ಕೊರೊನಾ ವಾರಿಯರ್ಸ್ ಹಾಗೂ ಸಾರ್ವಜನಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿ ಅರಿವು ಮೂಡಿಸುತ್ತಿದ್ದರು.
36 ವರ್ಷದ ಶರಣ್ಗೆ ಒಂದು ವರ್ಷದ ಮಗುವಿದೆ. ಕಳೆದ ವಾರವಷ್ಟೇ ಕಡು ಬಡವರನ್ನು ಗುರುತಿಸಿ, ದಿನಸಿ ಕಿಟ್ ವಿತರಿಸಿದ್ದರು.
ಓದಿ: ಯಡಿಯೂರಪ್ಪನವ್ರ ಮೇಲೆ ನನಗೆ ಪ್ರೀತಿ ಇದೆ, ಆದ್ರೆ ಸಿಎಂ ಆಗಿ ಕೆಲಸದಲ್ಲಿ ವಿಫಲರಾಗಿದ್ದಾರೆ: ಸಿದ್ದರಾಮಯ್ಯ