ETV Bharat / city

ಜ. 19ರಂದು ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್​ನ 9ನೇ ವಾರ್ಷಿಕೋತ್ಸವ ಆಚರಣೆ - ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್​ ಸುದ್ದಿ

ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್​ ವತಿಯಿಂದ 9ನೇ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಜನವರಿ 19 ರ ಬೆಳಿಗ್ಗೆ 10.30 ಕ್ಕೆ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

adhar-blood-donors-service-trust
ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್
author img

By

Published : Jan 16, 2020, 8:11 PM IST

ಶಿವಮೊಗ್ಗ: ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್​ನ 9ನೇ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಜನವರಿ 19 ರ ಬೆಳಿಗ್ಗೆ 10.30 ಕ್ಕೆ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಗೌರವ ಅಧ್ಯಕ್ಷ ಪ್ರಹ್ಲಾದ್​ ಶಾಸ್ತ್ರಿ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್ ಯಶಸ್ವಿಯಾಗಿ 8 ವರ್ಷ ಪೂರೈಸಿದೆ. ಸಂಸ್ಥೆಯ ಸದಸ್ಯರಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಯಂಪ್ರೇರಿತ ನಿರಂತರ ರಕ್ತದಾನ, ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಕ್ತದಾನದ ಜಾಗೃತಿ ಜಾಥಾ, ಅರಿವು ಹಾಗೂ ರಕ್ತದಾನ ಶಿಬಿರ, ನಾಟಕ ಪ್ರದರ್ಶನ ಸೇರಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಇಲ್ಲಿಯವರೆ 6000 ಕ್ಕೂ ಹೆಚ್ಚು ಯೂನಿಟ್​ ರಕ್ತ ಸಂಗ್ರಹಣೆ ಮಾಡಿದ್ದೆವೆ ಎಂದು ಪ್ರಹ್ಲಾದ್​ ಶಾಸ್ತ್ರಿ ತಿಳಿಸಿದರು.

ಜ. 19ರಂದು ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್​ನ 9ನೇ ವಾರ್ಷಿಕೋತ್ಸವ ಆಚರಣೆ

ಕಾರ್ಯಕ್ರಮವನ್ನು ಪತ್ರಕರ್ತ ಕಾಂ. ಲಿಂಗಪ್ಪ ಉದ್ಘಾಟಿಸಲಿದ್ದು, ಸಂಸ್ಥೆಯ ಗೌರವ ಅಧ್ಯಕ್ಷ ಪ್ರಶಾಂತ ಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೆಗ್ಗಾನ್ ಬೋಧನಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ರಘುನಂದನ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

ರಂಗ ಕಲಾವಿದರಾದ ಕೊಟ್ರಪ್ಪ ಜಿ. ಹಿರೇಮಾಗಡಿ, ಪದ್ಮನಾಭ ಹಾಗೂ ಸುಪ್ರಿಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು. ಗೋಷ್ಠಿಯಲ್ಲಿ ಟ್ರಸ್ಟ್​ನ ಸಂಸ್ಥಾಪಕ ಸಿಹಿಮೊಗೆ ಶ್ರೀನಿವಾಸ್, ಚಂದ್ರಶೇಖರ ಶಾಸ್ತ್ರಿ ಉಪಸ್ಥಿತರಿದ್ದರು.

Intro:ಶಿವಮೊಗ್ಗ,

ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್ ಇದರ
9ನೇ ವಾರ್ಷಿಕೋತ್ಸವ ಹಾಗೂ ಸನ್ಮಾನ
ಕಾರ್ಯಕ್ರಮವನ್ನು ಜನವರಿ 19 ರ ಬೆಳಿಗ್ಗೆ 10.30
ಕ್ಕೆ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ
ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಎಂದು ಸುದ್ದಿ ಗೋಷ್ಠಿಯಲ್ಲಿ ಸಂಸ್ಥೆಯ ಗೌರವ
ಅಧ್ಯಕ್ಷ ಪ್ರಹ್ಲಾದ್ ಶಾಸ್ತ್ರಿ ಮಾತನಾಡಿ, ಆಧಾರ
ರಕ್ತದಾನಿಗಳ ಸೇವಾ ಟ್ರಸ್ಟ್ ಯಶಸ್ವಿಯಾಗಿ 8ವರ್ಷ
ಪೂರೈಸಿದೆ. ಸಂಸ್ಥೆಯ ಸದಸ್ಯರಿಂದ ಪ್ರತಿ ಮೂರು
ತಿಂಗಳಿಗೊಮ್ಮೆ ಸ್ವಯಂಪ್ರೇರಿತ ನಿರಂತರ ರಕ್ತದಾನ,
ಗ್ರಾಮೀಣ ಭಾಗದಲ್ಲಿ ರಕ್ತದಾನದ ಜಾಗೃತಿ ಜಾಥಾ,
ಅರಿವು ಹಾಗೂ ರಕ್ತದಾನ ಶಿಬಿರ, ಇಲ್ಲಿಯವರೆಗೆ
6000ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಣೆ,
ಎನ್‍ಎಸ್‍ಎಸ್ ಶಿಬಿರಗಳಲ್ಲಿ ರಕ್ತದಾನದ ಮಹತ್ವ
ಕುರಿತು ಮಾಹಿತಿ, ರಕ್ತದ ಗುಂಪು ತಪಾಸಣೆ,
ಸಾರ್ವಜನಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಸಂಸ್ಥೆಯ
ಸದಸ್ಯರಿಂದ ರಕ್ತದಾನದ ಅರಿವು ನಾಟಕ ಪ್ರದರ್ಶನ
ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು
ಬರಲಾಗುತ್ತಿದೆ ಎಂದರು.
ಅಂದು ನಡೆಯುವ ಕಾರ್ಯಕ್ರಮವನ್ನು ಪತ್ರಕರ್ತ
ಕಾಂ. ಲಿಂಗಪ್ಪ ಉದ್ಘಾಟಿಸುವರು. ಸಂಸ್ಥೆಯ ಗೌರವ
ಅಧ್ಯಕ್ಷ ಪ್ರಶಾಂತ ಶಾಸ್ತ್ರಿ ಅಧ್ಯಕ್ಷತೆ ವಹಿಸುವರು. ಮುಖ್ಯ
ಅತಿಥಿಗಳಾಗಿ ಮೆಗ್ಗಾನ್ ಬೋಧನಾ ಆಸ್ಪತ್ರೆ ಜಿಲ್ಲಾ
ಶಸ್ತ್ರಚಿಕಿತ್ಸಕ ರಘುನಂದನ್ ಮತ್ತಿತರರು ಭಾಗವಹಿಸಲಿದ್ದಾರೆ
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ
ಗಣನೀಯ ಸಾಧನೆ ಮಾಡಿದಂತಹ ಸಾಧಕರನ್ನು
ಗುರುತಿಸಿ ಸನ್ಮಾನಿಸಲಾಗುತ್ತಿದೆ. ರಂಗ ಕಲಾವಿದರಾದ
ಕೊಟ್ರಪ್ಪ ಜಿ. ಹಿರೇಮಾಗಡಿ, ಪದ್ಮನಾಭ ಹಾಗೂ
ಸುಪ್ರಿಯ ಇವರನ್ನು ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಟ್ರಸ್ಟ್ನ ಸಂಸ್ಥಾಪಕ ಸಿಹಿಮೊಗೆ
ಶ್ರೀನಿವಾಸ್, ಚಂದ್ರಶೇಖರ ಶಾಸ್ತ್ರಿ ಉಪಸ್ಥಿತರಿದ್ದರು
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.