ETV Bharat / city

ಮದುವೆಯಲ್ಲಿ ಊಟ.. 50ಕ್ಕೂ ಹೆಚ್ಚು ಜನ ಅಸ್ವಸ್ಥ..

ಅಸ್ವಸ್ಥಗೊಂಡವರಿಗೆ ಗಂಜಿ ಹಾಗೂ ಊಟವನ್ನು ವಿತರಿಸಲಾಯಿತು. ಈ ವೇಳೆ ಜಿಲ್ಲಾ ಸರ್ಜನ್, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್, ಡಿಹೆಚ್ಒ ಕಚೇರಿಯ ನಾಗರಾಜ್ ನಾಯಕ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ..

wedding food
wedding food
author img

By

Published : Nov 12, 2021, 9:56 PM IST

Updated : Nov 12, 2021, 10:52 PM IST

ಶಿವಮೊಗ್ಗ: ಮದುವೆ ಮನೆಯಲ್ಲಿ ಊಟ (Wedding Food) ಮಾಡಿದ 50ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ಹರಮಘಟ್ಟದಲ್ಲಿ ನಡೆದಿದೆ.‌ ಶಿವಮೊಗ್ಗದ ತಾಲೂಕು ಹರಮಘಟ್ಟ ಗ್ರಾಮದವರು ಅಸ್ವಸ್ಥಗೊಂಡಿದ್ದಾರೆ.

ಗುರುವಾರ ರಾತ್ರಿ ಹರಮಘಟ್ಟ ಗ್ರಾಮದ ಪಕ್ಕದ ಆಲದಹಳ್ಳಿ ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂದಿರದಲ್ಲಿ ನಡೆದ ಆರಕ್ಷತೆಯಲ್ಲಿ ಊಟ ಮಾಡಿದ್ದರು. ಇಂದು ಮಧ್ಯಾಹ್ನದ ನಂತರ ಗ್ರಾಮಸ್ಥರಲ್ಲಿ ವಾಂತಿ-ಭೇದಿ ಕಾಣಿಸಿದೆ. ಮನೆಯಲ್ಲಿ ಮೂರು ನಾಲ್ಕು ಜನ ಅಸ್ವಸ್ಥರಾಗಿದ್ದಾರೆ.

ತಕ್ಷಣ ತಮ್ಮ ಗ್ರಾಮದ ಆಸ್ಪತ್ರೆಗೆ ಹೋಗಿ ಹೊಳಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ, ತೀವ್ರ ಅಸ್ವಸ್ಥಗೊಂಡವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಂತರ ಇನ್ನೂ ಅನೇಕರು ಅಸ್ವಸ್ಥಗೊಂಡ ಕಾರಣ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

50ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥ

ಆಸ್ಪತ್ರೆಗೆ ಜಿಪಂ ಸಿಇಒ ಭೇಟಿ : ಆರೋಗ್ಯ ವಿಚಾರಣೆ

ಘಟನೆಯ ವಿಚಾರ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ ಅವರು ಭೇಟಿ ನೀಡಿ, ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಗ್ರಾಮದ ಕುಡಿಯುವ ನೀರು ಸೇರಿದಂತೆ ಅಸ್ವಸ್ಥರ ವಾಂತಿಯನ್ನು ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದರು.

ಅಸ್ವಸ್ಥಗೊಂಡವರಿಗೆ ಗಂಜಿ ಹಾಗೂ ಊಟವನ್ನು ವಿತರಿಸಲಾಯಿತು. ಈ ವೇಳೆ ಜಿಲ್ಲಾ ಸರ್ಜನ್, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್, ಡಿಹೆಚ್ಒ ಕಚೇರಿಯ ನಾಗರಾಜ್ ನಾಯಕ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹರಮಘಟ್ಟ ಗ್ರಾಮದಲ್ಲಿ ದೀಪಾವಳಿ ಹಬ್ಬ ಇದ್ದ ಕಾರಣ ಹೆಚ್ಚಿನ ಜನ ಮದುವೆಯಲ್ಲಿ (Wedding Food) ಭಾಗಿಯಾಗಿರಲಿಲ್ಲ. ಗ್ರಾಮದಲ್ಲಿ ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದು, ಎಲ್ಲರನ್ನು ಪರೀಕ್ಷಿಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಬೇಕಾದವರನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ.

Last Updated : Nov 12, 2021, 10:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.