ಮೈಸೂರು: ನಾಡಹಬ್ಬ ದಸರಾಗೆ ಸಿದ್ಧತೆಗಳು ಭರದಿಂದ ಸಾಗಿವೆ. ಜಂಬೂಸವಾರಿಯ ದಿನ ಚಿನ್ನದ ಅಂಬಾರಿ ಹೊರುವ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸಿ ಕಸರತ್ತು ನಡೆಸಲಾಗಿದೆ.
ಇದಕ್ಕೂ ಮುನ್ನ, ಇಂದು ಬೆಳಿಗ್ಗೆ 9:25 ರಿಂದ 10:30ರ ಶುಭ ಲಗ್ನದಲ್ಲಿ ಮರದ ಅಂಬಾರಿಯನ್ನು ಅಭಿಮನ್ಯುವಿನ ಬೆನ್ನಿಗೆ ಕಟ್ಟಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.
ಅಕ್ಟೋಬರ್ 7ರಂದು ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ತದನಂತರ ಅಕ್ಟೋಬರ್ 15ರಂದು ಜಂಬೂಸವಾರಿ ನಡೆಯುತ್ತೆ. ಅಂದು ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ರತ್ನಖಚಿತ ಅಂಬಾರಿಯಲ್ಲಿಟ್ಟು ಗಣ್ಯರು ಪುಷ್ಪಾರ್ಚನೆ ನಡೆಸುತ್ತಾರೆ. ಈ ಮುಖೇನ ವಿಶ್ವವಿಖ್ಯಾತ ಜಂಬೂಸವಾರಿಗೆ ಚಾಲನೆ ಸಿಗಲಿದೆ.
ಇದನ್ನೂ ಓದಿ: Mysore Dussehra 2021: ಅರಮನೆ ದರ್ಬಾರ್ ಹಾಲ್ನಲ್ಲಿ ಚಿನ್ನದ ಸಿಂಹಾಸನ ಜೋಡಣೆ