ಮೈಸೂರು: ಕೋವಿಡ್-19 ತಡೆಗೆ ಸರ್ಕಾರ ಸೇರಿದಂತೆ ಜನರು ಜಾಗೃತಿ ಮೂಡಿಸುತ್ತಿದ್ದು, ''ಕೊರೊನಾ ವಿರುದ್ಧ ಕನ್ನಡಿಗರ ಹೋರಾಟದ ಕಹಳೆ ಮೊಳಗಲಿ'' ಎಂಬ ಹಾಡಿನ ಮೂಲಕ ವಿ.ವಿ. ಪುರಂ ಸಂಚಾರ ಠಾಣೆಯ ಎಎಸ್ಐ ಉದ್ಬೂರು ಪಿ.ರಾಜು ಅವರು ವಿಶಿಷ್ಟವಾಗಿ ಜನ ಜಾಗೃತಿ ಮೂಡಿಸುತ್ತಿದ್ದಾರೆ.
ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ವೈದ್ಯರು, ಪೌರಕಾರ್ಮಿಕರು, ಪೊಲೀಸರು, ಆರೋಗ್ಯ ಇಲಾಖೆ ಅನೇಕ ಸಂಘ ಸಂಸ್ಥೆಗಳು ಟೊಂಕ ನಿಂತಿವೆ. ಇದರೊಟ್ಟಿಗೆ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದೆ.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಡನ್ನು ಹಾಡಿರುವ ಎಎಸ್ಐ ಉದ್ಬೂರು ಪಿ. ರಾಜು ಅವರು, ಅನಗತ್ಯವಾಗಿ ತಿರುಗಾಡದಿರಿ, ಪ್ರಧಾನಿ ಅವರ ಹೋರಾಟಕ್ಕೆ ಒಗ್ಗಟ್ಟಾಗಿ ಕೈ ಜೋಡಿಸೋಣ. ಕೊರೊನಾ ಕೊಲ್ಲಲು ಕೈಜೋಡಿಸಿ ಸಾಗೋಣವೆಂದು ಸ್ವರಚಿತ ಹಾಡನ್ನ ಹಾಡಿದ್ದಾರೆ.