ETV Bharat / city

ಡಿ.ಕೆ.ಶಿವಕುಮಾರ್​​​ಗೆ ಇಂತಹ ಪ್ರಕರಣಗಳು ಹೊಸದೇನಲ್ಲ: ಕೇಂದ್ರ ಸಚಿವೆ ಕರಂದ್ಲಾಜೆ - Union minister Shobha Karandlaje vivit to Mysore

ಅವರ ಅಧಿಕಾರದಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಹಲವಾರು ಹಗರಣಗಳ ಕಾಂಗ್ರೆಸ್ ಸರ್ಕಾರವಾಗಿತ್ತು. ಅದರಲ್ಲಿ ಡಿಕೆಶಿ ನಡೆಸಿದ ಹಗರಣವನ್ನ ಅವರ ಪಕ್ಷದ ಮುಖಂಡರೇ ಬಯಲು ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
author img

By

Published : Oct 13, 2021, 6:49 PM IST

ಮೈಸೂರು: ಡಿ.ಕೆ.ಶಿವಕುಮಾರ್ ಅವರಿಗೆ ಇಂತಹ ಪ್ರಕರಣಗಳು ಹೊಸದೇನಲ್ಲ. ಕಾಂಗ್ರೆಸ್‌ ಅಂದ್ರೆ ಅದು ಹಗರಣಗಳ ಸರ್ಕಾರ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕುಟುಕಿದರು.

ಕಾಂಗ್ರೆಸ್‌ ವಕ್ತಾರ ವಿ.ಎಸ್.ಉಗ್ರಪ್ಪ, ಸಲೀಂ ನಡುವೆ ಸಂಭಾಷಣೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ಅಧಿಕಾರದಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಹಲವಾರು ಹಗರಣಗಳ ಕಾಂಗ್ರೆಸ್ ಸರ್ಕಾರವಾಗಿತ್ತು. ಅದರಲ್ಲಿ ಡಿಕೆಶಿ ನಡೆಸಿದ ಹಗರಣವನ್ನ ಅವರ ಪಕ್ಷದ ಮುಖಂಡರೇ ಬಯಲು ಮಾಡಿದ್ದಾರೆ ಎಂದು ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ದೇಶದಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಈ ವರ್ಷ ದೇಶದಲ್ಲಿ ಉತ್ತಮ ಮಳೆ ಆಗಿ ಕೃಷಿ ಆದಾಯ ಹೆಚ್ಚಾಗಿದೆ. ನಮಗೆ ಪೊಟ್ಯಾಷ್ ಹೊರ ದೇಶದಿಂದ ಬರುತ್ತೆ. ಕೊರೊನಾ ಕಾರಣಕ್ಕೆ ವಿದೇಶದಿಂದ ಬರುವ ರಸಗೊಬ್ಬರದಲ್ಲಿ ಕೊಂಚ ಕೊರತೆ ಇದೆ. ಮೋದಿ ಸರ್ಕಾರ ಇನ್ನೆರಡು ವರ್ಷದಲ್ಲಿ ರಸಗೊಬ್ಬರದಲ್ಲೂ ಸ್ವಾವಲಂಬನೆ ಸಾಧಿಸುವ ಕಾರ್ಯಕ್ರಮ ರೂಪಿಸಿದೆ ಎಂದರು.

ಅದರಲ್ಲೂ ಆತ್ಮನಿರ್ಭರ ಆಗುವತ್ತ ಹೆಚ್ಚು ಕಾರ್ಖಾನೆಗಳ ಸ್ಥಾಪನೆ ಆಗುತ್ತಿದೆ. ಈಗ ಎಣ್ಣೆ ಹೊರತುಪಡಿಸಿ ದೇಶ ಉಳಿದ ವಿಚಾರದಲ್ಲಿ ಆತ್ಮನಿರ್ಭರ ಸಾಧಿಸಿದೆ. ಖಾದ್ಯ ತೈಲದ ವಿಚಾರದಲ್ಲೂ ನಾವು ಸ್ವಾವಲಂಬನೆ ಸಾಧಿಸಲಿದ್ದೇವೆ ಎಂದು ತಿಳಿಸಿದರು.

ಉತ್ತರ ಪ್ರದೇಶದಲ್ಲಿ ದೇಶದ ರಾಜಕೀಯ ನಿರ್ಣಯ ಮಾಡುವ ಚುನಾವಣೆ ಬರಲಿದೆ. ಅಯೋಧ್ಯೆಯಲ್ಲಿ ಶತಮಾನಗಳ ನಮ್ಮ ಶ್ರೀರಾಮನ ಕನಸು ಈಡೇರಲಿದೆ. ಅದಕ್ಕಾಗಿ ಯೋಗೀಜಿಯ ಸರ್ಕಾರ ಮತ್ತೆ ಬರಬೇಕು. ಉತ್ತರ ಪ್ರದೇಶದ ಸಹ ಪ್ರಭಾರಿ ಆಗುವ ಅವಕಾಶ ನನಗೆ ಸಿಕ್ಕಿದೆ ಎಂದರು. ಈ ದೇಶ ನೆಮ್ಮದಿಯಿಂದ ಇರಬೇಕು. ಗಡಿಗಳ ರಕ್ಷಣೆ ಆಗಬೇಕು. ಕೃಷಿಕ ನೆಮ್ಮದಿಯಾಗಿರಬೇಕು ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

ಓದಿ:ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಡಿಕೆಶಿ ಕುರಿತ ಉಗ್ರಪ್ಪ-ಸಲೀಂ ಸಂಭಾಷಣೆಯ ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.