ETV Bharat / city

ಪಠ್ಯದಲ್ಲಿ ನಾವು ತಪ್ಪು ಮಾಡಿದ್ದರೆ ಇಷ್ಟು ವರ್ಷ ಬಿಜೆಪಿಯವರು ಏನು ಮಾಡುತ್ತಿದ್ದರು?: ಶಾಸಕ ತನ್ವೀರ್ ಸೇಠ್

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಮೈಸೂರಿನ ಎಫ್​ಟಿಎಸ್ ಬಳಿ ಮಾನವ ಸರಪಳಿ ನಿರ್ಮಿಸಿ ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು..

Tanveer Sait
ಶಾಸಕ ತನ್ವೀರ್
author img

By

Published : Jun 27, 2022, 5:40 PM IST

ಮೈಸೂರು : ನಮ್ಮ ಸರ್ಕಾರ ಪಠ್ಯ ವಿಚಾರದಲ್ಲಿ ತಪ್ಪು ಮಾಡಿದ್ದರೆ ಅಂದು ಬಿಜೆಪಿಯವರು ಏಕೆ ಹೇಳಲಿಲ್ಲ. ನಮ್ಮ ತಪ್ಪು ಇದ್ದಾಗ ತಿದ್ದಿ ಸರಿಪಡಿಸಲು ಹೇಳಬಹುದಿತ್ತು. ಆದರೆ, ಬಿಜೆಪಿ ಸರ್ಕಾರ ಪಠ್ಯದ ಮೂಲಕ ಮಕ್ಕಳಿಗೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಬಂದು ಹೋಗಿದ್ದಕ್ಕೆ 70 ಕೋಟಿ ಖರ್ಚು ಮಾಡಲಾಗಿದೆ. ಮೋದಿ ಅವರು ಬಂದು ಹೋಗಿದ್ದರಿಂದ ಮೈಸೂರಿಗೆ ಏನೂ ಲಾಭವಾಗಿಲ್ಲ. ಕೇಂದ್ರ ಸರ್ಕಾರದಿಂದ ಮೈಸೂರಿಗೆ ಏನು ಕೊಡುಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಅನುದಾನ ಹರಿದು ಬಂದಿದೆ ಎಂದರು.

ಪಠ್ಯದಲ್ಲಿ ನಾವು ತಪ್ಪು ಮಾಡಿದ್ದರೆ ಇಷ್ಟು ವರ್ಷ ಬಿಜೆಪಿಯವರು ಏನು ಮಾಡುತ್ತಿದ್ದರು ಎಂದು ಮಾಜಿ ಸಚಿವ ತನ್ವೀರ್‌ ಸೇಠ್‌ ಅವರು ಪ್ರಶ್ನೆ ಮಾಡಿರುವುದು..

ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಎಫ್​ಟಿಎಸ್ ಬಳಿ ಮಾನವ ಸರಪಳಿ ನಿರ್ಮಿಸಿ ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಪ್ರತಿಭಟಿಸಿದರು. ಅಗ್ನಿಪಥ ಯೋಜನೆಯಿಂದ ಯುವಕರ ಉದ್ಯೋಗಕ್ಕೆ ಮುಂದಿನ ದಿನಗಳಲ್ಲಿ ಮಾರಕವಾಗಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ: ಮುಂದಿನ ಚುನಾವಣೆಯೊಳಗೆ 'ಬಾಂಬೆ ಫೈಲ್ಸ್​' ಪುಸ್ತಕ ಬಿಡುಗಡೆ: ಹೆಚ್​. ವಿಶ್ವನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.