ಮೈಸೂರು : ನಗರದ ಪುರಭವನದ ಆವರಣದಲ್ಲಿ ಪಾರಂಪರಿಕ ಶೈಲಿಯ ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಶಂಕು ಸ್ಥಾಪನೆ ಮಾಡಿದರು.
ನಗರದ ಹೃದಯ ಭಾಗವಾದ ಪುರಭವನದಲ್ಲಿ ಮಲ್ಟಿಸ್ಟೋರ್ ಪಾರ್ಕಿಂಗ್ ವ್ಯವಸ್ಥೆ ಬರುತ್ತಿದ್ದು, ನಾಗರಿಕರಿಗೆ ಅನುಕೂಲವಾಗಲೆಂದು ಈ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗುತ್ತಿದೆ. ಶೌಚಾಲಯ ಕಟ್ಟಡವು 17 ಶೌಚಾಲಯ, 8 ಸ್ನಾನ ಗೃಹ, 1 ಸೆಕ್ಯುರಿಟಿ ಕೊಠಡಿ, 1 ಮಕ್ಕಳಿಗೆ ಹಾಲುಣಿಸುವ ಕೇಂದ್ರ ಒಳಗೊಂಡಿದೆ.

ಅಲ್ಲದೆ, ವಿಶೇಷಚೇತನರಿಗೆ ವಿಶೇಷ ಶೌಚಾಲಯದ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸುತ್ತಿದ್ದು, ಗುತ್ತಿಗೆದಾರರಿಗೆ 5 ವರ್ಷ ಕಾಲಾವಧಿ ನಿರ್ವಹಣೆ ಜವಾಬ್ದಾರಿಯನ್ನು ವಹಿಸಲಾಗಿದೆ.