ಮೈಸೂರು: ಮೈಸೂರು-ನಂಜನಗೂಡು ರಸ್ತೆಯ ಗಂಡೂರಾವ್ ನಗರದ ಸಮೀಪ ಸರಣಿ ಅಪಘಾತವಾಗಿದ್ದು, ಭಾರಿ ಅನಾಹುತ ತಪ್ಪಿದೆ.
ನಂಜನಗೂಡು ಕಡೆಯಿಂದ ಕಾರುಗಳು ಮೈಸೂರಿಗೆ ಬರುತ್ತಿದ್ದಾಗ ಗುಂಡೂರಾವ್ ನಗರದ ಬಳಿ ರಸ್ತೆ ಬದಿಯಿಂದ ಹಸು ರಸ್ತೆ ಮೇಲೆ ಬಂದಿದೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಇನ್ನೋವಾ ಕಾರು ಚಾಲಕ ತಕ್ಷಣವೇ ಪವರ್ ಬ್ರೇಕ್ ಹಾಕಿ ನಿಲ್ಲಿಸಿಕೊಂಡಿದ್ದಾರೆ. ಇದರ ಹಿಂದೆ ಬರುತ್ತಿದ ಬೊಲೋರೊ ಕಾರು, ಒಮ್ನಿ ಕಾರು ಹಾಗೂ ಜೀಪ್ ಒಂದಕ್ಕೊಂದು ಡಿಕ್ಕಿ ಹೊಡೆದು ತಕ್ಷಣ ಇನ್ನೋವಾ ಕಾರಿಗೆ ಗುದ್ದಿದೆ. ಹಸು ರಸ್ತೆ ದಾಟುತ್ತಿದ್ದಂತೆ ಇನ್ನೋವಾ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಬೊಲೋರೊ, ಒಮ್ನಿ ಕಾರು, ಹಾಗೂ ಜೀಪ್ ಅಪಘಾತವಾಗಿ ಒಂದಕ್ಕೊಂದು ಅಂಟಿಕೊಂಡು ನಿಂತುಕೊಂಡಿದೆ. ಹೀಗೆ ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆಯ ಮೇಲೆ ನಿಂತಿದ್ದರಿಂದ ಬೇರೆ ವಾಹನ ಸವಾರರು ಮೈಸೂರಿಗೆ ಹೋಗಲು ಪರದಾಡುವಂತಾಯಿತು. ನಂತರ ಸಾರ್ವಜನಿಕರೇ ಕಾರುಗಳನ್ನು ರಸ್ತೆ ಬದಿ ಸರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.