ETV Bharat / city

ದುಡಿಮೆಯ ನಂಬಿ ಬದುಕು... ನಿರಾಶ್ರಿತರ ಕೇಂದ್ರದಲ್ಲೂ ದುಡಿದು ಹಣ ಸಂಪಾದಿಸಿದ ಕೂಲಿ ಕಾರ್ಮಿಕರು

ಲಾಕ್​ಡೌನ್​ ಸಮಯದಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರು, ಕಾರ್ಮಿಕರು ಕ್ರೆಡಿಟ್​​-ಐ ಸಂಸ್ಥೆ ಸಹಾಯದಿಂದ ಪೇಪರ್​​ ಬ್ಯಾಗ್​ ತಯಾರಿಕೆ ಕುರಿತು ತರಬೇತಿ ಪಡೆದುಕೊಂಡು ಹಣ ಗಳಿಸಿದ್ದಾರೆ.

author img

By

Published : May 13, 2020, 2:52 PM IST

Refugees are earn money during lockdown time
ಲಾಕ್​ಡೌನ್​​​​

ಮೈಸೂರು: ಕೋವಿಡ್-19 ಪ್ರೇರಿತ ಲಾಕ್‍ಡೌನ್‍ನಿಂದ ಎಷ್ಟೋ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಆದರೆ, ಈ ಕಾರ್ಮಿಕರು ಮಾತ್ರ ಹಣ ಸಂಪಾದಿಸಿದ್ದಾರೆ.

ಲಾಕ್‍ಡೌನ್ ಘೋಷಣೆಯ ನಂತರ ಮಾರ್ಚ್ 25ರಂದು ಕೂಲಿ ಕಾರ್ಮಿಕರು, ನಿರಾಶ್ರಿತರಿಗೆ ಮೈಸೂರು ನಗರ ಪಾಲಿಕೆ ನಂಜರಾಜ ಬಹುದ್ದೂರ್ ಛತ್ರದಲ್ಲಿ ಆಶ್ರಯ ಒದಗಿಸಿತು. ನಂತರ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಅಲ್ಲಿದ್ದ 93 ಮಂದಿಯನ್ನು 7 ಕಡೆ ಸ್ಥಳಾಂತರ ಮಾಡಲಾಯಿತು. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಕ್ರೆಡಿಟ್-ಐ ಸಂಸ್ಥೆ ಪಡೆದುಕೊಂಡಿತು.

Refugees are earn money during lockdown time
ಪೇಪರ್​ ಬ್ಯಾಗ್​ ತಯಾರಿಕೆಯಲ್ಲಿ ನಿರತರಾದ ನಿರಾಶ್ರಿತರು

ನಂತರ ಈ ಸಂಸ್ಥೆ ಇಷ್ಟು ಮಂದಿಗೆ ಪೇಪರ್ ಬ್ಯಾಗ್ ತಯಾರಿಕೆ ಕೌಶಲ ತರಬೇತಿ ನೀಡಿತು. 93 ಮಂದಿಯನ್ನು 13 ತಂಡಗಳಾಗಿ ವಿಂಗಡಿಸಲಾಯಿತು. ಮೇ.11ರ ಬಳಿಕ ಮನೆಗೆ ತೆರಳಿರುವ 43 ಮಂದಿ ಹಣ ಸಂಪಾದಿಸಿಕೊಂಡು ಹೋಗಿದ್ದಾರೆ. ಎಷ್ಟು ಕೆ.ಜಿ. ಬ್ಯಾಗ್ ತಯಾರಿಸಿದ್ದಾರೋ ಅಷ್ಟು ಹಣ ಗಳಿಸಿದ್ದಾರೆ. ಓರ್ವ ವ್ಯಕ್ತಿ ₹ 1900 ಗಳಿಸಿದ್ದಾನೆ. ಸಿಂಗಲ್-ಡಬಲ್ ಲೇಯರ್ ಪೇಪರ್ ಬ್ಯಾಗ್ ತಯಾರಿಸಿದ್ದಾರೆ. ಎಲ್ಲರೂ ಸೇರಿ ₹ 16,466 ಸಂಪಾದನೆ ಮಾಡಿದ್ದಾರೆ.

ನಿರಾಶ್ರಿತರು ಮತ್ತು ವಲಸೆ ಕಾರ್ಮಿಕರು

43 ಮಂದಿ ರಾಮನಗರ, ಚನ್ನಪಟ್ಟಣ, ಮಳವಳ್ಳಿಯಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಹಾಗೂ ವಿವಿಧ ಕೆಲಸಗಳಿಗೆ ತೆರಳಿದ್ದಾರೆ. ಕಡಕೊಳ ಕೈಗಾರಿಕಾ ಕೇಂದ್ರದ ಆರ್-ಲೀಪ್ ಸಂಸ್ಥೆಯು ಕಟ್ಟಡ ಕಾಮಗಾರಿ, ಸೆಕ್ಯೂರಿಟಿ, ಬಣ್ಣ ಬಳಿಯುವ ಕೆಲಸಕ್ಕಾಗಿ 10 ಮಂದಿಯನ್ನು ನೋಂದಣಿ ಮಾಡಿಸಿಕೊಂಡಿದೆ. ಈ ಮೂಲಕ ನಿರಾಶ್ರಿತರ ಕೇಂದ್ರದಲ್ಲಿ 40 ಮಂದಿ ಮಾತ್ರ ಉಳಿದಿದ್ದಾರೆ.

ನೆರಂಬಳ್ಳಿ ಕಲ್ಯಾಣ ಮಂಟಪ, ನಿತ್ಯೊತ್ಸವ ಕಲ್ಯಾಣ ಮಂಟಪ, ಸಿಐಟಿವಿ ಛತ್ರ, ನೆಹರು ಯೂತ್ ಹಾಸ್ಟಲ್ ,ಗೋವಿಂದರಾವ್ ಹಾಸ್ಟೆಲ್, ಹೊಯ್ಸಳ ಕರ್ನಾಟಕದಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲಾಗಿತ್ತು. ಗೋವಿಂದ ರಾವ್, ಸಿಐಟಿಬಿ ಛತ್ರದಲ್ಲಿದ್ದ ನಿರಾಶ್ರಿತರು ತಮ್ಮ ಊರುಗಳಿಗೆ ತೆರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.