ಮೈಸೂರು : ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ(ಪ್ರೈ)ಲಿ. ಮೈಸೂರು, ತನ್ನ ಸಿ.ಎಸ್.ಆರ್ ಯೋಜನೆಯಡಿ ಮೈಸೂರು ಮೃಗಾಲಯದ ಪ್ರಾಣಿಗಳ ಚಿಕಿತ್ಸೆಗೆ ಅವಶ್ಯಕವಿದ್ದ " ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಖರೀದಿಗಾಗಿ 24.85 ಲಕ್ಷ ರೂ. ಗಳನ್ನು ನೀಡಿದೆ.
ಮೈಸೂರು ಮೃಗಾಲಯಲವು ಒಂದು ಸ್ವಾವಲಂಬಿ ಸಂಸ್ಥೆಯಾಗಿದ್ದು, ಕೋವಿಡ್ ಪರಿಣಾಮ ಮೃಗಾಲಯದ ನಿರ್ವಹಣೆ ಹಾಗೂ ಚಿಕಿತ್ಸೆ ನೀಡಲು ಕಷ್ಟವಾಗಿದೆ. ಇದನ್ನು ಆಲಿಸಿದ ಭಾರತೀಯ ರಿಸರ್ವ್ ಬ್ಯಾಂಕ್ ಮೈಸೂರು, ಪ್ರಾಣಿಗಳ ಚಿಕಿತ್ಸೆಗೆ ಬೇಕಾಗಿದ್ದ ಸುಮಾರು 24.85 ಲಕ್ಷ ರೂ.ಗಳ ಮೌಲ್ಯದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷಿನ್ ಅನ್ನು ಕೊಡುಗೆಯಾಗಿ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಪ್ರೈ)ಲಿ. ಮೃಗಾಲಯದ ಪ್ರಾಣಿಗಳ ಸಲುವಾಗಿ ಈಗಾಗಲೇ ಸಿ.ಎಸ್.ಆರ್.ನ ಸ್ಕೀಮ್ ನಲ್ಲಿ ಹಲವು ಕೊಡುಗೆಗಳನ್ನು ನೀಡಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅಜೀತ್ ಕುಲಕರ್ಣಿ ತಿಳಿಸಿದ್ದಾರೆ.