ETV Bharat / city

ಯಾರೇ ಅಡ್ಡಿ ಬಂದರೂ ಮಹಿಷಾ ದಸರಾ ಮಾಡುತ್ತೇವೆ: ಪ್ರೊ.ಮಹೇಶ್ ಚಂದ್ರಗುರು - Mysore

ಯಾರೇ ಅಡ್ಡಿ ಬಂದರೂ ಮೈಸೂರಿನಲ್ಲಿ ನಾವು ಮಹಿಷಾ ದಸರಾ ಮಾಡುತ್ತೇವೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಹೇಳಿದ್ದಾರೆ.

Prof.Mahesh chandra guru statement on chamundeshwari and mahishasura
ಯಾರೇ ಅಡ್ಡಿ ಬಂದರೂ ಮಹಿಷಾ ದಸರಾ ಮಾಡುತ್ತೇವೆ: ಪ್ರೊ.ಮಹೇಶ್ ಚಂದ್ರಗುರು
author img

By

Published : Sep 13, 2021, 3:53 PM IST

Updated : Sep 13, 2021, 11:02 PM IST

ಮೈಸೂರು: ಚಾಮುಂಡೇಶ್ವರಿ ಮಿಥ್ಯ, ಮಹಿಷಾಸುರ ಸತ್ಯ. ಯಾರೇ ಅಡ್ಡಿ ಬಂದರೂ ನಾವು ಮಹಿಷಾ ದಸರಾ ಮಾಡುತ್ತೇವೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಹೇಳಿದ್ದಾರೆ.

ಯಾರೇ ಅಡ್ಡಿ ಬಂದರೂ ಮಹಿಷಾ ದಸರಾ ಮಾಡುತ್ತೇವೆ: ಪ್ರೊ.ಮಹೇಶ್ ಚಂದ್ರಗುರು

ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇದ್ದಾಗ, ವಿ.ಶ್ರೀನಿವಾಸ್ ಪ್ರಸಾದ್ ಸಚಿವರಾಗಿದ್ದಾಗ ಮಹಿಷಾ ದಸರಾ ಆಚರಣೆ ಮಾಡಲು ಅನುಮತಿ ನೀಡಲಾಗಿತ್ತು. ಆದರೆ ಸಂಸದ ಪ್ರತಾಪ್‌ ಸಿಂಹ ಮಹಿಷಾ ದಸರಾ ಆಚರಣೆ ಅಡ್ಡಿ ಪಡಿಸುತ್ತಿದ್ದಾರೆ. ಈತ ಪುಂಡ. ಇಂತಹ ಸಾವಿರ ದೊಣ್ಣೆ ನಾಯಕರು ಬಂದರೂ ನಾವು ಮಹಿಷಾ ದಸರಾ ಮಾಡುತ್ತೇವೆ ಎಂದರು.

ಚಾಮುಂಡೇಶ್ವರಿ ಮಿಥ್ಯ, ಮಹಿಷಾಸುರ ಸತ್ಯ. ಆದರೆ, ವೈದಿಕ ಧರ್ಮದ ಮನುವಾದಿಗಳು ಮಹಿಷಾಸುರನನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ. ಈ ಸತ್ಯವನ್ನು ಎಲ್ಲರೂ ಅರಿಯಬೇಕಿದೆ. ದಸರಾಗೆ ನಾವು ಹೇಗೆ ತೊಂದರೆ ಕೊಡುವುದಿಲ್ಲವೋ, ಅದೇ ರೀತಿ ಮಹಿಷಾ ದಸರಾ ಆಚರಣೆ ಮಾಡಲು ಜಿಲ್ಲಾಡಳಿತ ಅನುಮತಿ ಕೊಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಸಂಸದ ಪ್ರತಾಪ ಸಿಂಹ ಪುರೋಹಿತಶಾಹಿ, ಕಾರ್ಪೊರೇಟ್ ವಲಯದ ಪ್ರತಿನಿಧಿ : ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು

Last Updated : Sep 13, 2021, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.