ಮೈಸೂರು: ತುಂಬು ಗರ್ಭಿಣಿಯೋರ್ವರು ಆ್ಯಂಬುಲೆನ್ಸ್ಗಾಗಿ ಹೆರಿಗೆ ನೋವು ಸಹಿಸಿಕೊಂಡು ಕಾಡುದಾರಿಯಲ್ಲಿ ಮಳೆಯನ್ನೂ ಲೆಕ್ಕಿಸದೇ 1 ಕಿ.ಮೀ. ನಡೆದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಬೊಮ್ಮಲಾಪುರ ಹಾಡಿ ಗ್ರಾಮದ ರಂಜಿತ ಕಾಲುನಡಿಗೆಯಲ್ಲಿ ತೆರಳಿದ ಗರ್ಭಿಣಿ.
ಹೆಚ್.ಡಿ. ಕೋಟೆ ತಾಲೂಕಿನ ಬೊಮ್ಮಲಾಪುರ ಹಾಡಿಗೆ ರಸ್ತೆ ಸಂಪರ್ಕ ಇಲ್ಲದ ಹಿನ್ನೆಲೆ, ಇಂದಿಗೂ ಹಾಡಿ ಮಂದಿ ಕಾಲುನಡಿಗೆಯಲ್ಲೇ ಕಾಡಿನ ಹಾದಿಯಲ್ಲಿ ಕ್ರೂರ ಮೃಗಗಳ ಕಾಟದ ನಡುವೆಯೂ ಜೀವದ ಹಂಗು ತೊರೆದು ಬದುಕಬೇಕಾದ ಸ್ಥಿತಿ ಇದೆ.
ಇದನ್ನೂ ಓದಿ: ಮೈಸೂರಿನಲ್ಲಿ ಸೇತುವೆಯಿಂದ ನದಿಗೆ ಹಾರಿದ ಯುವತಿಯ ರಕ್ಷಣೆ: Video Viral
ಶುಕ್ರವಾರ ರಂಜಿತ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಶಾ ಕಾರ್ಯಕರ್ತೆ ಹಾಗೂ ಹಾಡಿ ಮಂದಿಯ ಸಹಕಾರದಿಂದ ಮಳೆಯಲ್ಲಿ ಕೊಡೆಯ ಆಶ್ರಯದೊಂದಿಗೆ ಹಾಡಿ ಹೊರಗಿನ ಮುಖ್ಯರಸ್ತೆವರೆಗೆ ನಡೆದು ಆ್ಯಂಬುಲೆನ್ಸ್ ಏರಿದ್ದಾರೆ. ಸರಗೂರು ತಾಲೂಕಿನ ವಿವೇಕಾನಂದ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ರಂಜಿತ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.