ಮೈಸೂರು : ಕವಲಂದೆ ಚೋಟಾ ಪಾಕಿಸ್ತಾನ ಪ್ರಕರಣದ ಹಿಂದೆ ಮೌಲ್ವಿಯ ಕೈವಾಡ ಇದೆ. ಆತನನ್ನು ಕೂಡಲೇ ಬಂಧಿಸಬೇಕು ಎಂದು ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮ್ಮಿತ್ತ ಮೈಸೂರಿಗೆ ಆಗಮಿಸಿದ್ದ ಅವರು, ಮಾಧ್ಯಮಗಳ ಜತೆ ಮಾತನಾಡಿದರು.
ಮೌಲ್ವಿಯ ಪ್ರಚೋದನಾಕಾರಿ ಭಾಷಣದಿಂದ ಈ ರೀತಿ ಘೋಷಣೆ ಕೂಗಿದ್ದಾರೆ. ಇದರಲ್ಲಿ ಆತನ ಕೈವಾಡವಿದೆ. ಈ ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು. ಕವಲಂದೆ ಭಾಗದಲ್ಲಿ ಶೇ.60ರಷ್ಟು ಮುಸ್ಲಿಂರಿದ್ದಾರೆ. ಆದ್ದರಿಂದ ಈ ರೀತಿ ಕೋಮು ದ್ವೇಷವನ್ನು ಸೃಷ್ಟಿಸುವ ಹುನ್ನಾರ ನಡೆದಿದೆ. ತಕ್ಷಣವೇ ಮೌಲ್ವಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಚೋಟಾ ಪಾಕಿಸ್ತಾನ್ ಆಡಿಯೋ ವೈರಲ್ ಪ್ರಕರಣ.. ಇಬ್ಬರು ಆರೋಪಿಗಳ ಬಂಧನ
ಆಜಾನ್ಗೆ ಪರ್ಯಾಯವಾಗಿ ಸುಪ್ರಭಾತ : ನಮ್ಮ ಹೋರಾಟ ಆಜಾನ್ ವಿರುದ್ಧ ಅಲ್ಲ, ಅದರಿಂದ ಹೊರ ಬರುವ ಶಬ್ದದ ವಿರುದ್ಧ. ಅವರು ಆಜಾನ್ ಕೂಗಿದರೆ ನಾವು ಸುಪ್ರಭಾತ ಹಾಡುತ್ತೇವೆ. ಮೇ 9ರಿಂದ ಎಲ್ಲಾ ದೇವಸ್ಥಾನಗಳಲ್ಲಿ ಸುಪ್ರಭಾತ ಅಭಿಯಾನ ನಡೆಯಲಿದೆ. ಯಾವುದೇ ಕಾರಣಕ್ಕೂ ಇದು ನಿಲ್ಲುವುದಿಲ್ಲ ಎಂದಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ನಂಜನಗೂಡಿನ ಹುಚ್ಚಗಣಿ ಮಾರಮ್ಮನ ದೇವಸ್ಥಾನ ಒಡೆಯುತ್ತಾರೆ. ಅದೇ ಆದೇಶದಂತೆ ಮಸೀದಿ ಮೇಲಿನ ಮೈಕ್ ಯಾಕೆ ತೆಗೆಯುತ್ತಿಲ್ಲ. ಯಾರ ಶಾಂತಿಗೂ ಭಂಗ ತರುವ ಕೆಲಸವನ್ನ ಹಿಂದೂಗಳು ಮಾಡುವುದಿಲ್ಲ. ಶಾಂತಿಭಂಗವಾಗುತ್ತಿರುವುದು ಮುಸ್ಲಿಮರಿಂದ ಎಂದು ದೂರಿದರು.
ಒಂದು ವೇಳೆ ಮುಸ್ಲಿಮರು ಶಾಂತಿ ಕದಡಿದರೆ ಅದಕ್ಕೆ ಸರ್ಕಾರವೇ ಹೊಣೆ. ಇದಕ್ಕೆಲ್ಲ ಸರ್ಕಾರದ ದುರ್ಬಲತೆಯೇ ಕಾರಣ. ಹಿಂದೂಗಳು ನಿಮಗೆ ಮತ ಕೊಟ್ಟಿದ್ದು, ಇದೆಲ್ಲವನ್ನು ಸರಿ ಮಾಡಲಿ ಎಂದು. ನಿಮಗೆ ಆಗಲಿಲ್ಲ ಎಂದರೆ ನಮಗೆ ಬಿಟ್ಟುಬಿಡಿ. ಒಂದೇ ದಿನದಲ್ಲಿ ಎಲ್ಲಾ ಸದ್ದನ್ನ ನಾವು ಅಡಗಿಸುತ್ತೇವೆ ಎಂದು ಸರ್ಕಾರಕ್ಕೆ ಮುತಾಲಿಕ್ ಸವಾಲೆಸೆದಿದ್ದಾರೆ.
ಕವಲಂದೆ ಪ್ರಕರಣ ಕುರಿತು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹಿಂದೂ ಸಂಘಟನೆಗಳಿಂದ ಕವಲಂದೆ ಚಲೋ ಅಭಿಯಾನವನ್ನು ಮಾಡಬೇಕಾಗುತ್ತದೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಿಡಿಗೇಡಿ ಯುವಕರನ್ನು ನಾವೇ ಹಿಡಿದುಕೊಟ್ಟಿದ್ದೇವೆ: ಚೋಟಾ ಪಾಕಿಸ್ತಾನ್ ಆಡಿಯೋ ಬಗ್ಗೆ ಮುಸ್ಲಿಂ ಮುಖಂಡರ ಖಂಡನೆ