ಮೈಸೂರು : ಉಕ್ರೇನ್‌ನಲ್ಲಿ ಓದಲು ತೆರಳಿರುವ ತಮ್ಮ ಮಗ ಸಂಕಷ್ಟಕ್ಕೆ ಸಿಲುಕಿದ್ದರಿಂದಾಗಿ ಪೋಷಕರು ಕಣ್ಣೀರು ಹಾಕಿದ್ದಾರೆ. ಮೈಸೂರಿನ ಟಿ.ಕೆ.ಲೇಔಟ್ನ ನಿವಾಸಿಗಳಾದ ಪುಟ್ಟಮಾದೇಗೌಡ ಹಾಗೂ ಪ್ರಮೀಳಾ ರಾಣಿ ಪುತ್ರ ಪಿ.ಗಣೇಶ್ ಅವರು ಉಕ್ರೇನ್ನ ಜಪ್ರೋಸಿಯಾ ಸಿಟಿಯಲ್ಲಿದ್ದು, ಪೋಷಕರು ಆತಂಕದಲ್ಲಿದ್ದಾರೆ.
ಐದನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಗಣೇಶ್ನ ಆಗಮನದ ನಿರೀಕ್ಷೆಯಲ್ಲಿ ಪೋಷಕರಿದ್ದರು. ಆದ್ರೀಗ ಪರಿಸ್ಥಿತಿ ಎಲ್ಲರನ್ನೂ ಆತಂಕಕ್ಕೆ ತಳ್ಳಿದೆ. ನಿನ್ನೆ ರಾತ್ರಿ 11ಗಂಟೆ ವೇಳೆಯಲ್ಲಿ ಪೋಷಕರು ವಿಡಿಯೋ ಕಾಲ್ ಮೂಲಕ ಮಾತನಾಡಿದ್ದು, ಸದ್ಯ ಹಾಸ್ಟೆಲ್ನಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಪುತ್ರ ಮಾಹಿತಿ ನೀಡಿದ್ದಾನೆ ಎಂದು ಪೋಷಕರು ತಿಳಿಸಿದರು.
ಜಿಲ್ಲಾಡಳಿತದಿಂದ ಕ್ರಮ : ಮೈಸೂರಿನಿಂದ ಉಕ್ರೇನ್ಗೆ ತೆರಳಿದ ನಾಗರಿಕರ ಮಾಹಿತಿ ಕಲೆ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಡಳಿತ ನೀಡಿರುವ ದೂರವಾಣಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿದ ಆನೇಕಲ್ ವಿದ್ಯಾರ್ಥಿ: ಪೋಷಕರಿಗೆ ಧೈರ್ಯ ತುಂಬಿದ ಶಾಸಕ ಬಿ ಶಿವಣ್ಣ
ವಿವಿಧ ಉದ್ದೇಶಗಳಿಂದ ಉಕ್ರೇನ್ಗೆ ತೆರಳಿರುವ ಮೈಸೂರು ಜಿಲ್ಲೆಯವರ ಮಾಹಿತಿಯನ್ನು ಸಂಬಂಧಿಸಿದವರು ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂ.ಸಂ. 0821-2423800 ಅಥವಾ 1077 ಅಥವಾ ಜಿಲ್ಲಾ ವಿಪತ್ತು ತಜ್ಞರಾದ ಸುಧೀರ್ ಅವರ ಮೊ.ಸಂ. 9845852481ಗೆ ಸಂಪರ್ಕಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.