ETV Bharat / city

ಮೈಸೂರು ಯುವಕನ ಮೆದುಳು ನಿಷ್ಕ್ರಿಯ.. ನಾಲ್ವರಿಗೆ ಅಂಗಾಗ ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು

author img

By

Published : Nov 11, 2021, 12:16 PM IST

Updated : Nov 11, 2021, 5:14 PM IST

ಮರದಿಂದ ಕೆಳಗೆ ಬಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡ(brain dead patient) ಹಿನ್ನೆಲೆ ಕುಟುಂಬಸ್ಥರು ಪುತ್ರನ ಅಂಗಾಗಗಳನ್ನು ದಾನ(organs donation) ಮಾಡಿದ್ದಾರೆ.

organs donation for 4 people from brain dead patient of mysore
ಮೆದುಳು ನಿಷ್ಕ್ರಿಯಗೊಂಡವರಿಂದ ಅಂಗಾಗ ದಾನ

ಮೈಸೂರು: ತೆಂಗಿನಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು(brain dead patient), ಕುಟುಂಬಸ್ಥರು ಪುತ್ರನ ಅಂಗಾಗಗಳನ್ನು ದಾನ(organs donation) ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ತೂಬಿನ‌ಕೆರೆಯ ಹನುಮಂತು ಹಾಗೂ ಪೂರ್ಣಿಮಾ ದಂಪತಿಯ ಪುತ್ರ ಹೇಮಂತ್ ಕುಮಾರ್ (27) ಕಳೆದ ಗುರುವಾರ ತೆಂಗಿನ ಮರದಲ್ಲಿ ಕಾಯಿ‌ ಕೀಳಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದರು. ತಕ್ಷಣ ಇವರನ್ನು ಮೈಸೂರಿನ ಖಾಸಗಿ ಆಸ್ಪತ್ರೆ(mysore hospital)ಗೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷೆ ಮಾಡಿದಾಗ ಇವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಮೆದುಳು ನಿಷ್ಕ್ರಿಯ(brain dead)ಗೊಂಡಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದರು.

ಇದನ್ನೂ ಓದಿ: ಎಟಿಎಂನಲ್ಲಿ ಹಣ ಕಳ್ಳತನಕ್ಕೆ ಯತ್ನ: ಆರೋಪಿ ಅರೆಸ್ಟ್​

ಇಂತಹ ಕಷ್ಟದ ಸಮಯದಲ್ಲೂ ಹೇಮಂತ್ ಕುಮಾರ್ ತಂದೆ - ತಾಯಿ ಇವರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದು, ಅದರಂತೆ ಎರಡು ಕಿಡ್ನಿ, ಒಂದು ಲಿವರ್, ಹೃದಯ ಕವಾಟ ದಾನ ಮಾಡಿ ನಾಲ್ವರು ರೋಗಿಗಳ ಜೀವ ಉಳಿಸಿದ್ದಾರೆ. ನಾಲ್ವರ ಬದುಕಿಗೆ ಬೆಳಕಾಗಿ, ಸಾರ್ಥಕತೆ ಮೆರೆದಿದ್ದಾರೆ.‌

Last Updated : Nov 11, 2021, 5:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.