ETV Bharat / city

ದುಷ್ಟ ಸರ್ಕಾರಗಳ ವಿರುದ್ಧ ಸಂಘಟನೆಗಳೆಲ್ಲ ಒಕ್ಕೂಟವಾಗಿರೋದು ಒಳ್ಳೇದು-ದೇವನೂರು ಮಹಾದೇವ - ಭೂ ಸುಧಾರಣಾ ಕಾಯ್ದೆ ತಿದ್ದುಪಡಿ

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಪಂಜಾಬ್ ಮತ್ತು ಹರಿಯಾಣದಲ್ಲಿ ಸಮುದಾಯುದ ಧ್ವನಿಯಾಗಿ ಹೋರಾಟ ಆರಂಭವಾಗಿದೆ. ಕರ್ನಾಟಕದಲ್ಲೂ ರೈತ, ದಲಿತ, ಕಾರ್ಮಿಕ ಹಾಗೂ ಇನ್ನಿತರ ಸಂಘಟನೆಗಳು ಒಟ್ಟಾಗಿ ಹೋರಾಟ ಮಾಡುತ್ತಿರುವುದು ದೊಡ್ಡ ಬೆಳವಣಿಗೆ..

Devanur Mahadeva
ಸಾಹಿತಿ ದೇವನೂರು ಮಹಾದೇವ
author img

By

Published : Sep 23, 2020, 6:19 PM IST

ಮೈಸೂರು : ಸಂಘಟನೆಗಳು ಒಟ್ಟಾಗಿ ಹೋರಾಟ ಮಾಡುತ್ತಿವೆ. ‌ಈ ಸಂದರ್ಭದಲ್ಲಿ ಚಿಲ್ಲರೆಯಾಗಿ ಯೋಚನೆ ಮಾಡುವುದನ್ನು ಬಿಟ್ಟು ವಿಶಾಲವಾಗಿ ಯೋಚನೆ ಮಾಡಬೇಕೆಂದು ಸಾಹಿತಿ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ದೇವನೂರು ಮಹಾದೇವ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇಂದು ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಇತ್ತೀಚೆಗೆ ಸಂಘಟನೆಗಳಲ್ಲಿ ಸ್ವಲ್ಪ ಗೊಂದಲ ಇತ್ತು. ಆದರೆ, ಈಗ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಪಂಜಾಬ್ ಮತ್ತು ಹರಿಯಾಣದಲ್ಲಿ ಸಮುದಾಯುದ ಧ್ವನಿಯಾಗಿ ಹೋರಾಟ ಆರಂಭವಾಗಿದ್ದು, ಅದೇ ರೀತಿ ಕರ್ನಾಟಕದಲ್ಲೂ ರೈತ, ದಲಿತ, ಕಾರ್ಮಿಕ ಹಾಗೂ ಇನ್ನಿತರ ಸಂಘಟನೆಗಳು ಐಕ್ಯತೆ ಹೋರಾಟ ಮಾಡುತ್ತಿರುವುದು ದೊಡ್ಡ ಬೆಳವಣಿಗೆ.

ಮುಖಂಡರು ನಾನು ಎಂಬ ಚಿಲ್ಲರೆ ಬಿಟ್ಟು ನಾವು ಎಂಬ ಪ್ರೀತಿಯಲ್ಲಿ ಒಗ್ಗಟ್ಟಾಗಿ ಯೋಚನೆ ಮಾಡಬೇಕು. ಈಗ ಇರುವ ಸರ್ಕಾರ ದುಷ್ಟ ಸರ್ಕಾರವಾಗಿದ್ದು, ಇದರ ವಿರುದ್ಧ ಹೋರಾಟಕ್ಕೆ ಒಗ್ಗಟ್ಟಾಗದಿದ್ದರೆ ಅದನ್ನು ಎದುರಿಸಲು ಆಗುವುದಿಲ್ಲ. ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಪಂಜಾಬ್ ರೀತಿ ಹೋರಾಡಿ, ಸಮುದಾಯದ ಧ್ವನಿಯಾಗಬೇಕು. ಆಗ ಮಾತ್ರ ಸರ್ಕಾರವನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದರು.

ನಾನು ಎಂಬುದು ಬಿಟ್ಟು ನಾವು ಎಂದು ಸಂಘಟನೆಗಳೆಲ್ಲ ಹೋರಾಡಬೇಕು- ಸಾಹಿತಿ ದೇವನೂರು ಮಹಾದೇವ

ಹಿಂದೆ ಇದ್ದ ಜಮೀನ್ದಾರಿ ಪದ್ಧತಿ ಮತ್ತೆ ವಾಪಸ್ ಬರುತ್ತದೆ. ಕಂಪನಿದಾರರು ಭೂಮಿಯನ್ನು ಪಡೆಯಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಬದುಕು ಮಧ್ಯಮ ವರ್ಗದ ಬದುಕು ಎಲ್ಲವೂ ನಾಶವಾಗುತ್ತದೆ ಎಂದು ಭೂ ಸುಧಾರಣಾ ಕಾಯ್ದೆಯಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಸಾಹಿತಿ ದೇವನೂರು ಮಹಾದೇವ ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.