ಮೈಸೂರು: ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಪೊಲೀಸ್ ಭವನಕ್ಕೆ ನೋಟಿಸ್ ನೀಡಿ ಜಪ್ತಿ ಮಾಡುವುದಾಗಿ ನಗರ ಪಾಲಿಕೆ ಎಚ್ಚರಿಕೆ ನೀಡಿದೆ.
ನಗರದ ಜಾಕಿ ಕ್ವಾಟ್ರಸ್ನಲ್ಲಿರುವ ಪೊಲೀಸ್ ಭವನವು ತೆರಿಗೆ ಕಟ್ಟದೆ 1.65 ಕೋಟಿ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿದೆ. ಇದರ ಬಗ್ಗೆ ಕಳೆದ ಏಪ್ರಿಲ್ನಲ್ಲಿಯೇ 30 ದಿನಗಳೊಳಗೆ ಬಾಕಿ ಪಾವತಿ ಮಾಡುವಂತೆ ಪಾಲಿಕೆ ಸೂಚಿಸಿತ್ತು.
ಆದರೂ ಕೂಡ ತೆರಿಗೆ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ಇನ್ನು 15 ದಿನಗಳಲ್ಲಿ ಬಾಕಿ ಉಳಿದಿರುವ 1.65 ಕೋಟಿ ರೂ. ಹಣವನ್ನು ಪಾವತಿಸಬೇಕು. ತೆರಿಗೆ ಪಾವತಿಸದಿದ್ದರೆ ಪೊಲೀಸ್ ಭವನವನ್ನು ಜಪ್ತಿ ಮಾಡುವುದಾಗಿ ಪಾಲಿಕೆ ನೋಟಿಸ್ ನೀಡಿ ಎಚ್ಚರಿಕೆ ನೀಡಿದೆ.