ಮೈಸೂರು: ನಗರದಲ್ಲಿ ವಿಚಿತ್ರ ಪ್ರಕರಣವೊಂದು ಸದ್ದು ಮಾಡಿದೆ. ಒಬ್ಬಳೇ ಮಹಿಳೆ ಮೂವರು ಪುರುಷರೊಂದಿಗೆ ಮದುವೆಯಾಗಿ ವಂಚಿಸಿರುವ ಆರೋಪ ಪ್ರಕರಣ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಅಲ್ಲದೇ, ಬೇರೊಬ್ಬ ಯುವಕನೊಂದಿಗೆ ಇರುವಾಗ ಮೂರನೇ ಗಂಡನಿಗೆ ಕೈಗೆ ರೆಡ್ ಹ್ಯಾಂಡಾಗಿ ಈ ಮಹಿಳೆ ಸಿಕ್ಕಿ ಬಿದ್ದಿದ್ದಾಳಂತೆ. ಆದರೆ, ಇದೀಗ ಆಕೆಯಿಂದ ತನಗೆ ಪ್ರಾಣ ಭಯವಿದೆ ಎಂದು ಮೂರನೇ ಗಂಡ ಅವಲತ್ತುಕೊಳ್ಳುತ್ತಿದ್ದಾರೆ.
ಹೌದು, ಮೈಸೂರಿನ ಉದಯಗಿರಿ ನಿವಾಸಿ ನಿಧಾ ಖಾನ್ ಮೂವರೊಂದಿಗೆ ಮದುವೆ ಆಗಿದ್ದರೂ ಸಹ ಬೇರೆ ಯುವಕರನ್ನು ತನ್ನ ಬಲೆಗೆ ಬೀಳಿಸಿಕೊಂಡು ಗಂಡನಿಗೆ ವಂಚಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಈಕೆ ನಡವಳಿಕೆಯಿಂದ ಅನುಮಾನಗೊಂಡ ಮೂರನೇ ಗಂಡ ಅಜಾಮ್ ಖಾನ್, ಕಳೆದ ವಾರ ಬೇರೊಬ್ಬ ಯುವಕನ ಜತೆ ಕಾರಿನಲ್ಲಿ ತನ್ನ ಪತ್ನಿ ಇದ್ದ ವೇಳೆ ಆಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಳಂತೆ. ಪತ್ನಿ ಮತ್ತು ಆ ಯುವಕನನ್ನು ಹಿಡಿದ ಅಜಾಮ್ ಖಾನ್ ಉದಯಗಿರಿ ಪೊಲೀಸರಿಗೆ ಒಪ್ಪಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಅಲ್ಲದೇ, ಈ ಘಟನೆ ಬಳಿಕ ತಮ್ಮ ಸಂಪ್ರದಾಯದ ಪ್ರಕಾರ ವಿವಾಹ ವಿಚ್ಛೇದನಕ್ಕಾಗಿ ನಿರ್ಧರಿಸಿದ್ದಾರೆ. ಆದರೆ, ಆಕೆ ಮಾತ್ರ ವಿಚ್ಛೇದನ ಕೊಡಲ್ಲ ಅಂತಿದ್ದಾಳಂತೆ. ಅಷ್ಟೇ ಅಲ್ಲ, ನನ್ನ ಮೇಲೆ ಹಲ್ಲೆ ಮಾಡಲು ನಿಧಾ ಖಾನ್ ತನಗೆ ಪರಿಚಯಸ್ಥ ಯುವಕರಿಗೆ ಸೂಚಿಸಿದ್ದಾಳೆ. ಹೀಗಾಗಿಯೇ ಆಕೆಯಿಂದ ನನಗೆ ಜೀವ ಬೆದರಿಕೆ ಇದೆ ಹಾಗೂ ವಿಚ್ಛೇದನದ ವಿಷಯವಾಗಿ ಅಜಾಮ್ ಖಾನ್ ವಕೀಲರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಮೂರು ನಿಖಾ ಬಳಿಕವೂ ಗಂಡಸರನ್ನ ಮಾಡ್ತಿದ್ದಳು ಮಿಕ.. ಗಂಡನ ಕೈಗೆ ಸಿಕ್ಕು ಎಣೆಸ್ತಾವ್ಳೇ ಕಂಬಿ ಲೆಕ್ಕ..