ಮೈಸೂರು: ಲಾಕ್ಡೌನ್ ನಡುವೆಯೂ ಬಾಲ್ಯ ವಿವಾಹ ನಡೆದ ಘಟನೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ದೇವಾಲಯದಲ್ಲಿ ಅಪ್ರಾಪ್ತ ಬಾಲಕಿಗೆ ಆಕೆಯ ಕುಟುಂಬಸ್ಥರೆಲ್ಲಾ ಸೇರಿಕೊಂಡು ಹುರ ಗ್ರಾಮದ ವರನ ಜೊತೆ ಮದುವೆ ಮಾಡಿಸಲು ಸಿದ್ಧತೆ ನಡೆಸಿದ್ದರು.
ಈ ಹಿನ್ನೆಲೆ ಅಧಿಕಾರಿಗಳು ಮದುವೆ ಗಂಡು ರವಿಕುಮಾರ್ನನ್ನು ಪೊಲೀಸರಿಗೆ ಒಪ್ಪಿಸಿದ್ದು, ಅಧಿಕಾರಿಗಳೇ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರವಿಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.