ETV Bharat / city

ಗ್ರಾ.ಪಂ. ಚುನಾವಣೆ: 99 ಸಾವಿರ ಶಾಯಿ ಬಾಟಲ್ ಪೂರೈಕೆಗೆ ಮುಂದಾದ ಮೈಲ್ಯಾಕ್

ಗ್ರಾಮ‌ ಪಂಚಾಯತ್​ ಚುನಾವಣೆ ಹಿನ್ನೆಲೆ 99 ಸಾವಿರ ಶಾಯಿ ಬಾಟಲ್ ಹಾಗೂ 6,580 ಪ್ಯಾಕ್ ಸೀಲಿಂಗ್ ವ್ಯಾಕ್ಸ್ ಗೆ ಚುನಾವಣಾ ಆಯೋಗವು ಬೇಡಿಕೆ ಇಟ್ಟಿದ್ದು, ಈ ಹಿನ್ನೆಲೆಯಲ್ಲಿ ಶಾಯಿ ತಯಾರಿಸಿ ರವಾನಿಸುವ ಕಾರ್ಯದಲ್ಲಿ ಮೈಲ್ಯಾಕ್ ಸಂಸ್ಥೆ ತೊಡಗಿಕೊಂಡಿದೆ.

ಶಾಯಿ ಬಾಟಲ್ ಪೂರೈಕೆಗೆ ಮುಂದಾದ ಮೈಲ್ಯಾಕ್
ಶಾಯಿ ಬಾಟಲ್ ಪೂರೈಕೆಗೆ ಮುಂದಾದ ಮೈಲ್ಯಾಕ್
author img

By

Published : Dec 9, 2020, 12:52 PM IST

ಮೈಸೂರು: ಗ್ರಾಮ ಪಂಚಾಯತ್​ ಚುನಾವಣೆ ಹಿನ್ನೆಲೆ 1.15 ಕೋಟಿ ರೂ. ಮೊತ್ತದ 5 ಎಂ.ಎಲ್ ನ 99,000 ಅಳಿಸಲಾಗದ ಶಾಯಿಗಳಿಗೆ ಚುನಾವಣಾ ಆಯೋಗ ಬೇಡಿಕೆ ಇಟ್ಟಿದ್ದು, ಶಾಯಿ ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ ಎಂದು ಮೈಲ್ಯಾಕ್ ಅಧ್ಯಕ್ಷ ಎನ್.ವಿ ಫಣೀಶ್ ತಿಳಿಸಿದ್ದಾರೆ.

ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ (ಮೈಲ್ಯಾಕ್) ಅಧ್ಯಕ್ಷ ಎನ್.ವಿ ಫಣೀಶ್ ಸುದ್ದಿಗೋಷ್ಠಿ ನಡೆಸಿ ಕಂಪನಿಯ ವಹಿವಾಟಿನ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಎರಡನೇ ಹಂತದಲ್ಲಿ ಗ್ರಾಮ ಪಂಚಾಯತ್​ ಚುನಾವಣೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಚುನಾವಣಾ‌ ಆಯೋಗವು 99 ಸಾವಿರ ಅಳಿಸಲಾಗದ ಶಾಯಿ ಬಾಟಲ್​ಗಳಿಗೆ ಬೇಡಿಕೆ ಇಟ್ಟಿತ್ತು. 2019-20 ನೇ ಸಾಲಿನಲ್ಲಿ ಕಂಪನಿ ಒಟ್ಟು 21.52 ಕೋಟಿ ರೂ. ವಹಿವಾಟು ನಡೆಸಿದ್ದು, 4.70 ರೂ. ಕೋಟಿ ಲಾಭ ಪಡೆದಿದೆ. ಹಾಗೂ ಕಂಪನಿಯ ಸಿಎಸ್​ಆರ್​ ಫಂಡ್​ನಲ್ಲಿ 20.57 ಲಕ್ಷ ರೂಪಾಯಿಯನ್ನು ವಿವಿಧ ಸಾಮಾಜಿಕ‌ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿಗೆ ಶೌಚಾಲಯ ಹಾಗೂ ಮೂಲಭೂತ ಸೌಕರ್ಯಗಳಿಗೆ ವಿನಿಯೋಗ ಮಾಡಲಾಗಿದೆ. 2021 ಕ್ಕೆ 20 ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಇದೆ ಎಂದು ಮಾಹಿತಿ ನೀಡಿದರು.

99,000 ಶಾಯಿಗೆ ಬೇಡಿಕೆಯಿಟ್ಟ ಚುನಾವಣಾ ಆಯೋಗ:

ಗ್ರಾಮ‌ ಪಂಚಾಯತ್​ ಚುನಾವಣೆಯಲ್ಲಿ 5 ಎಂ.ಎಲ್ ಸಾಮರ್ಥ್ಯದ 99 ಸಾವಿರ ಶಾಯಿ ಬಾಟಲ್ ಹಾಗೂ 6,580 ಪ್ಯಾಕ್ ಸೀಲಿಂಗ್ ವ್ಯಾಕ್ಸ್ ಗೆ ಚುನಾವಣಾ ಆಯೋಗವು ಬೇಡಿಕೆ ಇಟ್ಟಿದ್ದು, ಇದರಿಂದಾಗಿ ಮೈಲ್ಯಾಕ್ 1.15 ಕೋಟಿ ರೂ. ವಹಿವಾಟು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಶಾಯಿ ತಯಾರಿಸಿ ರವಾನಿಸುವ ಕಾರ್ಯದಲ್ಲಿ ಸಂಸ್ಥೆ ತೊಡಗಿಕೊಂಡಿದೆ.

ಇತ್ತೀಚೆಗೆ ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ತೆಲಂಗಾಣ, ಉತ್ತರ ಪ್ರದೇಶದಲ್ಲಿ ಮೇಲ್ಮನೆಗೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲೂ ಮೈಲ್ಯಾಕ್ ಶಾಯಿ ಪೂರೈಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಹಿವಾಟು ನಡೆಸುವ ನಿರೀಕ್ಷೆ ಹೊಂದಿದೆ. ನೆರೆಯ ರಾಜ್ಯಗಳ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸಹ ಮೈಲ್ಯಾಕ್ ಶಾಯಿ ಬಳಸಲಾಗುತ್ತಿದೆ. ಇದರ ಜೊತೆಗೆ ಪೇಂಟ್ ಘಟಕ ಸ್ಥಾಪನೆ ಕುರಿತು ಚಿಂತನೆ ನಡೆಸಲಾಗಿದೆ ಎಂದು ಮೈಲ್ಯಾಕ್ ಅಧ್ಯಕ್ಷ ಫಣೀಶ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.