ಮೈಸೂರು : ಮೇಯರ್ ಚುನಾವಣೆಗೆ ಮೀಸಲಾತಿ ಪ್ರಕಟ ಆಗುವವರೆಗೂ ನಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಶಾಸಕ ಸಾ ರಾ ಮಹೇಶ್ ತಿಳಿಸಿದರು.
ಓದಿ: ಪ್ರತಿಭಟನಾಕಾರರಿಂದ ಪೊಲೀಸ್ ಜೀಪ್ಗಳ ಮೇಲೆ ದಾಳಿ: ವಿಡಿಯೋ ರಿಲೀಸ್
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ಪಕ್ಷಗಳು ರಾಜಕೀಯವಾಗಿ ನಮ್ಮ ವಿರೋಧಿಗಳೇ.. ಹಾಗಾಗಿ, ಸದ್ಯ ತಟಸ್ಥವಾಗಿ ಇರುತ್ತೇವೆ. ಪಾಲಿಕೆ ಮೈತ್ರಿ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ. ನಗರ ಪಾಲಿಕೆ ಸದಸ್ಯರು ಮಾಜಿ ಮೇಯರ್ಗಳು ಕೆಲವು ಕಾಂಗ್ರೆಸ್‌ನವರು ನಡೆದುಕೊಂಡ ರೀತಿಗಳನ್ನ ನಮ್ಮ ಗಮನಕ್ಕೆ ತಂದಿದ್ದಾರೆ.
ನಗರದ ಇತರೆ ಕಾಂಗ್ರೆಸ್ ನಾಯಕರ ಜೊತೆ ನಮ್ಮ ಸಂಬಂಧ ಚೆನ್ನಾಗಿದೆ. ಯಾರೋ ಇಬ್ಬರು ಮೂವರ ನಡವಳಿಕೆಯಿಂದ ಪಕ್ಷವನ್ನ ದೂರಲು ಸಾಧ್ಯವಿಲ್ಲ. ಆದರೆ, ಮೀಸಲಾತಿ ಪ್ರಕಟವಾದ ನಂತರ ನಮ್ಮ ಸದಸ್ಯರ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಎಂದರು.
ನಿನ್ನೆಯ ಗಣರಾಜೋತ್ಸವ ಸಂದರ್ಭದ ಘಟನೆ ನಿಜಕ್ಕೂ ಖಂಡನೀಯ. ತಿಂಗಳುಗಳಿಂದ ಹೋರಾಟ ಮಾಡುತ್ತಿರುವ ಕೆಲವು ರೈತರು ನಿನ್ನೆ ತಮ್ಮ ವ್ಯಾಪ್ತಿಯನ್ನ ಮೀರಿದ್ದಾರೆ. ಇದು ಪೊಲೀಸರ ವೈಫಲ್ಯ ಅಥವಾ ರೈತರ ದುಡುಕು ನಿರ್ಧಾರ ಅಂತಾನೂ ಹೇಳಬಹುದು. ನಿನ್ನೆಯ ಈ ಘಟನೆ ಆಗಬಾರದಿತ್ತು ಎಂದು ತಿಳಿಸಿದರು.
ಪ್ರಧಾನಿ, ರಾಷ್ಟ್ರಪತಿ ಇರುವ ಜಾಗದಲ್ಲಿ ಪೊಲೀಸರು ಮತ್ತು ರೈತರು ಇಬ್ಬರಿಗೂ ನೋವಾಗಿದೆ. ಹೋರಾಟದ ಸಂದರ್ಭದಲ್ಲೂ ಪ್ರತಿಭಟನಾಕಾರರು ನಮ್ಮ ಆಸ್ತಿ ನಮ್ಮ ಸರ್ಕಾರ ಅನ್ನೋದನ್ನ ಮನದಲ್ಲಿಟ್ಟುಕೊಳ್ಳಬೇಕು ಎಂದರು.