ಮೈಸೂರು : ಜಿಲ್ಲೆಯಲ್ಲಿ ರೆಮ್ಡಿಸಿವಿರ್ ಕಳ್ಳರ ಹಾವಳಿ ಹೆಚ್ಚಾಗಿದೆ. ಎರಡು ದಿನದಲ್ಲಿ 7 ಮಂದಿಯನ್ನು ಬಂಧಿಸಿ, 12 ಚುಚ್ಚು ಮುದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಉಪ್ಪಿನಮೊಳೆ ನಿವಾಸಿ, ಶಾಸಕ ಪುಟ್ಟರಂಗ ಶೆಟ್ಟಿ ಸಹೋದರನ ಪುತ್ರ ಜಿ.ಸುರೇಶ್, ಕೆ.ಆರ್.ನಗರ ತಾಲೂಕು ದಗ್ಗನಹಳ್ಳಿ ನಿವಾಸಿ ಡಿ.ಎಂ.ರಾಘವೇಂದ್ರ, ಹಾಸನ ಜಿಲ್ಲೆ ಅರಕಲಗೂಡು ತಾಲೂಕು ರಾಮನಕೊಪ್ಪಲು ನಿವಾಸಿ ಆಶೋಕ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಜಿ. ಸುರೇಶ್ ಮೈಸೂರಿನ ಜೆಪಿ ನಗರದ ಕಾಮಾಕ್ಷಿ ಆಸ್ಪತ್ರೆಯ ಸ್ಟಾಫ್‌ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ.
ಕೋವಿಡ್ ಸೋಂಕಿತರಿಗೆ ನೀಡಲಾಗುವ ರೆಮ್ಡಿಸಿವಿರ್ ಚುಚ್ಚುಮದ್ದನ್ನು ಕದ್ದು ಹೆಚ್ಚಿನ ಬೆಲೆಗೆ ಮಾರುತ್ತಿದ್ದರು. ಮೂವರು ಆರೋಪಿಗಳಿಂದ 7 ಸಾವಿರ ರೂ.ನಗದು ಹಣ ಹಾಗೂ 4 ಇಂಜೆಕ್ಷನ್ ವಶಪಡಿಸಿಕೊಳ್ಳಲಾಗಿದೆ.
ಮತ್ತೆರಡು ಪ್ರಕರಣದಲ್ಲಿ ನಾಲ್ವರು ಸ್ಟಾಫ್ ನರ್ಸ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 8 ರೆಮ್ಡಿಸಿವಿರ್ ಔಷಧಿ ವಶಪಡಿಸಿಕೊಳ್ಳಲಾಗಿದೆ.