ಮೈಸೂರು : ಪ್ರಧಾನಿಯಾಗಿ ನರೇಂದ್ರ ಮೋದಿ 7 ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ, ಬಿಜೆಪಿ ಕಚೇರಿ ಮುಂಭಾಗ ಇರುವ ಮನೆಗಳಿಗೆ ಕಷಾಯ, ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಲಾಯಿತು.
ಓದಿ: ಮಕ್ಕಳನ್ನೂ ಕಾಡುತ್ತಿದೆ ಬ್ಲ್ಯಾಕ್ ಫಂಗಸ್ ಭೂತ: ದೃಷ್ಟಿ ಕಳೆದುಕೊಂಡ 11 ವರ್ಷದ ಬಾಲಕ!
ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಅವರು ಬಿಜೆಪಿ ಕಚೇರಿಯ ಮುಂಭಾಗ ಇರುವ ಮನೆ-ಮನೆಗೆ ತೆರಳಿ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಕಷಾಯ ವಿತರಿಸಿದರು.
ಇದಕ್ಕೂ ಮುನ್ನ ಕಚೇರಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಮೋದಿ ಅವರು ಪ್ರಧಾನಿಯಾಗಿ 7 ವರ್ಷ ಪೂರೈಸಿದ್ದಾರೆ. ಅವರ ಕಾರ್ಯ ವೈಖರಿಯನ್ನ ಜನತೆ ಮೆಚ್ಚಿದ್ದು, ಕೊರೊನಾ ಸಂದರ್ಭದಲ್ಲಿಯೂ ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎಂದರು.
ಪಾಸಿಟಿವ್ ರೇಟ್ ಕಡಿಮೆ ಆಗುತ್ತಿರುವ ಆಧಾರದ ಮೇಲೆ ಲಾಕ್ಡೌನ್ ಕಡಿತ : ಮನೆ ಮನೆ ಸರ್ವೇಯ ವರದಿಗಳು ಮತ್ತು ಪಾಸಿಟಿವ್ ರೇಟ್ ಕಡಿಮೆ ಆಗುತ್ತಿರುವ ಆಧಾರದ ಮೇಲೆ ಲಾಕ್ಡೌನ್ ಕಡಿತ ಮಾಡುವ ಇಂಗಿತವಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಉನ್ನತೀಕರಣಗೊಂಡಿರುವ ತುಳಸಿದಾಸ್ ಆಸ್ಪತ್ರೆಯ ಕಟ್ಟಡದಲ್ಲಿ 50 ಹಾಸಿಗೆಗಳ ಕೋವಿಡ್ ಹೆರಿಗೆ ಆಸ್ಪತ್ರೆ ಉದ್ಘಾಟನೆ ಮಾಡಿದರು. ಜನರ ಜೀವ ಎಷ್ಟು ಮುಖ್ಯವೋ, ಜೀವನವೂ ಅಷ್ಟೇ ಮುಖ್ಯ. ಜೀವ, ಜೀವನ ಎರಡನ್ನೂ ಕಾಪಾಡುವುದು ನಮ್ಮ ಕರ್ತವ್ಯ.
ಮೈಸೂರಿನಲ್ಲಿ ಪಾಸಿಟಿವ್ ಪ್ರಕರಣ ತಗ್ಗುತ್ತಿವೆ. ಹೀಗಾಗಿ, ಲಾಕ್ಡೌನ್ ಕಡಿತ ಮಾಡುವ ಇಂಗಿತ ವ್ಯಕ್ತಪಡಿಸಿದ್ದೀನಿ. ಜನರು ಒಂದೂವರೆ ತಿಂಗಳಿನಿಂದ ಲಾಕ್ಡೌನ್ಗೆ ಸ್ಪಂದಿಸಿದ್ದಾರೆ. ಜನರ ಜೀವನವನ್ನು ಕಾಪಾಡಬೇಕಿದೆ ಎಂದರು.
ನೂತನವಾಗಿ ಉದ್ಘಾಟನೆಗೊಂಡಿರುವ ಈ ಆಸ್ಪತ್ರೆಯು ಎಲ್ಲಾ ವ್ಯವಸ್ಥೆಯನ್ನು ಒಳಗೊಂಡಿದೆ. ಸುಸಜ್ಜಿತವಾಗಿರುವುದರ ಜೊತೆಗೆ ಬಹಳ ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಕೋವಿಡ್‌ನಿಂದ ಮೃತರಾದ ಪೋಷಕರ ಮಕ್ಕಳಿಗೆ ಅನಾಥ ಭಾವ ಕಾಡಬಾರದು. ಅವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಸುತ್ತೂರು ಮಠದ ಸ್ವಾಮೀಜಿಯವರು ಉಚಿತ ಶಿಕ್ಷಣದ ವ್ಯವಸ್ಥೆ ಮಾಡಿದ್ದಾರೆ. ಹಾಗೆಯೇ, ಈಗ ಪ್ರಧಾನಮಂತ್ರಿಗಳು ಇಂತಹ ಮಕ್ಕಳಿಗಾಗಿ ನಿಧಿಯನ್ನು ತೆರೆದಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ನಂತರ ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಹೀಗಾಗಿ, ಮೈಸೂರು ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಗೂ ಕೂಡ ಸರ್ವೆಯನ್ನು ನಡೆಸಲಾಗುತ್ತಿದೆ.
ಇದರಿಂದ ಮನೆ ಮನೆ ಸರ್ವೆಯು ಶೇ. 60 ರಿಂದ 70 ರಷ್ಟು ಸರ್ವೆಯು ಮುಗಿದಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಸಹ ಶೇ. 70 ರಿಂದ 80 ರಷ್ಟು ಮನೆ ಮನೆ ಸರ್ವೆ ಮುಗಿದಿದೆ ಎಂದು ಹೇಳಿದರು.