ಮೈಸೂರು : ಕೊಂಡ ಹಾಯುವಾಗ ಆಯಾ ತಪ್ಪಿ ಭಕ್ತನೋರ್ವ ಬೆಂಕಿಗೆ ಬಿದ್ದಿರುವ ಘಟನೆ ತಿ.ನರಸೀಪುರ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ರಂಗಸಮುದ್ರ ಗ್ರಾಮದಲ್ಲಿ ನಡೆಯುವ ಹುಚ್ಚುಗಮ್ಮ ದೇವಿ ಮತ್ತು ಲಕ್ಷ್ಮಿದೇವಿ ಹಬ್ಬದ ಕೊಂಡೋತ್ಸವವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅನೇಕ ಭಕ್ತರು ಕೊಂಡ ಹಾಯ್ದರು.
ಆದರೆ, ಕೊಂಡ ಹಾಯುವಾಗ ಭಕ್ತನೋರ್ವ ಆಕಸ್ಮಿಕವಾಗಿ ಆಯಾ ತಪ್ಪಿ ಬಿದ್ದಿದ್ದಾರೆ. ನಂತರ ಕೂಡಲೇ ನೆರೆದಿದ್ದ ಭಕ್ತರು, ಭಕ್ತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೊರೊನಾ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಕೊಂಡೋತ್ಸವ ನಿಲ್ಲಿಸಲಾಗಿತ್ತು. ಆದರೆ, ಈ ವರ್ಷ ಅದ್ದೂರಿಯಾಗಿ ಕೊಂಡೋತ್ಸವ ಆಯೋಜನೆ ಮಾಡಿದ್ದರಿಂದ ಸುತ್ತಮುತ್ತಲ ಗ್ರಾಮಸ್ಥರು ಕೊಂಡೋತ್ಸವದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ತೆಳ್ಳನೂರ ಕೊಂಡೋತ್ಸವ: ಮೈಮೇಲೆ ಕೆಂಡ ಸುರಿದುಕೊಂಡು ಭಕ್ತಿಯ ಪರಾಕಾಷ್ಠೆ