ಮೈಸೂರು: ಕೊರೊನಾ ನಿಯಂತ್ರಣ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ,ಮಂತ್ರಿಗಳು ಸಾಥ್ ನೀಡುತ್ತಿಲ್ಲ ಸಿಎಂ ಏಕಾಂಗಿಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಮ್ ಲಕ್ಷ್ಮಣ್ ಅವರು ಆರೋಪಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್, ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಯಡಿಯೂರಪ್ಪ ಅವರಿಗೆ ಮಂತ್ರಿಗಳು ಸಾಥ್ ನೀಡುತ್ತಿಲ್ಲ. ಮೂರು ಜನ ಡಿಸಿಎಂ ಗಳಿದ್ದರೂ, ಸಚಿವರಿದ್ದರೂ, ವೈರಸ್ ಬಿಕ್ಕಟ್ಟು ನಿಯಂತ್ರಿಸಲು ಸಹಕಾರ ನೀಡುತ್ತಿಲ್ಲ. ಈ ವಿಚಾರದಲ್ಲಿ ವೈಫಲ್ಯವನ್ನು ಯಡಿಯೂರಪ್ಪ ಅವರಿಗೆ ತಲೆಗೆ ಕಟ್ಟಲು ಬಿಜೆಪಿ ಒಳಗಡೆ ಹುನ್ನಾರ ನಡೆಸುತ್ತಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡಲು ಒಳತಂತ್ರ ನಡೆಯುತ್ತಿದೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.
ಕೋವಿಡ್ ಮಾರ್ಗಸೂಚಿ ಜಾರಿಗೊಳಿಸುವುದರಲ್ಲಿ ಸರ್ಕಾರ ಎಡವಿದೆ. ಬೆಳಗ್ಗೆ ಒಂದು ಆದೇಶ , ಮಧ್ಯಾಹ್ನ ಒಂದು, ಸಂಜೆ ಒಂದು ಆದೇಶ ನೀಡುವ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕೋವಿಡ್ ಸ್ಥಿತಿ ನರಕ ಸದೃಶ್ಯವಾಗಿದ್ದು ಜನ ಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ. ಆದರೆ, ಸರ್ಕಾರ ಏನು ಆಗಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದೆ . ಆಕ್ಸಿಜನ್ ಕೊರತೆ , ಬೆಡ್ ಕೊರತೆ ಇದ್ರೂ ಏನು ಆಗಿಲ್ಲ ಎಂಬ ರೀತಿಯಲ್ಲಿ ಆರೋಗ್ಯ ಸಚಿವರು ಪತ್ರಿಕಾ ಹೇಳಿಕೆ ನೀಡುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಮ್.ಲಕ್ಷ್ಮಣ್ ಆರೋಪಿಸಿದ್ದಾರೆ.