ಮೈಸೂರು: ಜಿ.ಟಿ.ದೇವೇಗೌಡರೇ, ಇದು ನಿಮ್ಮ ಅಂತ್ಯ ಕಾಲ ಎಂದು ಜೆಡಿಎಸ್ ಮುಖಂಡ ಸಿದ್ದೇಗೌಡ ಆಕ್ರೋಶ ವ್ಯಕ್ತಪಡಿಸಿದರು.
'ಜಿ.ಟಿ.ದೇವೇಗೌಡರೇ, 2008ರಲ್ಲಿಯೂ ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿಗೆ ಹೋದಿರಿ, 2013ರಲ್ಲಿ ಮರಳಿ ಮನೆಗೆ ಬಂದಿರಿ. ನಾವು ಎಲ್ಲರನ್ನೂ ಸಂಘಟನೆ ಮಾಡಿದ್ದೆವು. ಹಗಲು-ರಾತ್ರಿ ದುಡಿದು, ಯಾವ ಪಕ್ಷ ನಿಮ್ಮನ್ನು ಅಧಿಕಾರಕ್ಕೆ ತಂದಿತು ಎಂಬುದನ್ನೀಗ ಮರೆತಿದ್ದೀರಾ?. 2018ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರನ್ನು 36 ಸಾವಿರ ಅಂತರದ ಮತಗಳಲ್ಲಿ ಸೋಲಿಸಿ, ನಿಮ್ಮನ್ನು ಜಯಶೀಲರನ್ನಾಗಿ ಮಾಡಿದ ಚಾಮುಂಡೇಶ್ವರಿ ಕ್ಷೇತ್ರ, ಅದಕ್ಕಾಗಿ ಈ ಶಿಕ್ಷೆ ಕೊಡುತ್ತಿದ್ದೀರಾ? ಇದು ನಿಮ್ಮ ಅಂತ್ಯ ಕಾಲ' ಎಂದು ಟೀಕಿಸಿದರು.
'ಜೆಡಿಎಸ್ ನಂಬಿ ಕೆಟ್ಟವರಿಲ್ಲ'
1962ರಲ್ಲಿ ಪಕ್ಷ ಪ್ರಾರಂಭವಾಗಿದೆ. ಅಂದಿನಿಂದ ಇಲ್ಲಿಯವರೆಗೆ ಹೊಲ ಉತ್ತಿರುವವನು, ದನ ಮೇಯಿಸುತ್ತಿದ್ದವನು ಕೂಡಾ ಪಕ್ಷದಲ್ಲಿ ಸಂಸದ, ಶಾಸಕ, ಮಂತ್ರಿಗಳಾಗಿದ್ದಾರೆ, ಉನ್ನತ ಹುದ್ದೆಯಲ್ಲಿದ್ದಾರೆ. ಅವರ ಕುಟುಂಬಸ್ಥರು ನಿರಾತಂಕವಾಗಿ ಬದುಕುತ್ತಿದ್ದಾರೆ. ಜೆಡಿಎಸ್ ಪಕ್ಷ ನಂಬಿ ಕೆಟ್ಟವರಿಲ್ಲ ಎಂದರು.
ಪ್ರಚಾರ ಸಭೆಗೆ ಹೋಗದಂತೆ ನಾಯಕರೊಬ್ಬರು ಧಮ್ಕಿ ಹಾಕಿದ್ದಾರೆ. ಆದರೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜನರು ಪ್ರೀತಿ ವಿಶ್ವಾಸಕ್ಕೆ ತಲೆಬಾಗುತ್ತಾರೆಯೇ ಹೊರತು ಧಮ್ಕಿ ಹಾಕಿದರೆ ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೂಡ ಜಿಟಿಡಿ ವಿರುದ್ಧ ಟೀಕಾಸಮರ ನಡೆಸಿದರು.
ಇದನ್ನೂ ಓದಿ: ಜಿ.ಟಿ. ದೇವೇಗೌಡರಿಗೆ ಜೆಡಿಎಸ್ ಮನೆ ಬಾಗಿಲು ಮುಚ್ಚಿದೆ: ಕುಮಾರಸ್ವಾಮಿ