ETV Bharat / city

ದರ್ಶನ್ ಅಭಿಮಾನಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರ; ಜಗ್ಗೇಶ್​ಗೆ ದಚ್ಚು ಫ್ಯಾನ್ಸ್ ಮುತ್ತಿಗೆ - VIDEO - statement about darshan fans

ದರ್ಶನ್ ಮತ್ತು ಅಭಿಮಾನಿಗಳ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಿದ್ರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಗ್ಗೇಶ್​, ಆ ಆಡಿಯೋದಲ್ಲಿ ಮಾತನಾಡಿರೋದು ನಾನಲ್ಲ ಎಂದು ಹೇಳುವ ಮೂಲಕ ದರ್ಶನ್ ಅಭಿಮಾನಿಗಳನ್ನು ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ.

ಜಗ್ಗೇಶ್​
ಜಗ್ಗೇಶ್​
author img

By

Published : Feb 22, 2021, 4:06 PM IST

Updated : Feb 22, 2021, 4:57 PM IST

ಕೆಲ ದಿನಗಳ ಹಿಂದೆ ನಟ ದರ್ಶನ್ ಅಭಿಮಾನಿಗಳ ಬಗ್ಗೆ ನವರಸ ನಾಯಕ ಜಗ್ಗೇಶ್ ಅವಹೇಳನಕರವಾಗಿ ಮಾತನಾಡಿದ್ದಾರೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಇವತ್ತು ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ಸ್​ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್ ಜೊತೆಗೆ ಫೋನಿನಲ್ಲಿ ಮಾತನಾಡಬೇಕಾದ್ರೆ, 'ದರ್ಶನ್ ಅವ್ರ ಅಭಿಮಾನಿಗಳ ತರ ತಲೆ ಮಾಂಸ ಕೇಳುವವರಲ್ಲ' ಎಂಬ ಆಡಿಯೋವೊಂದು ದರ್ಶನ್ ಮತ್ತು ಅವ್ರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಈ ವಿಚಾರವಾಗಿ ಇಂದು ಮೈಸೂರಿನಲ್ಲಿ ಜಗ್ಗೇಶ್​ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ‌.

ಜಗ್ಗೇಶ್​ಗೆ ದಚ್ಚು ಫ್ಯಾನ್ಸ್ ಮುತ್ತಿಗೆ

ಸದ್ಯ ಜಗ್ಗೇಶ್ ಮೈಸೂರಿನ ಬನ್ನೂರು ಸಮೀಪದ ಅತ್ತಳ್ಳಿ ಬಳಿ ತೋತಾಪುರಿ ಸಿನಿಮಾ ಶೂಟಿಂಗ್​ನಲ್ಲಿ ಇರಬೇಕಾದರೆ, ಅಭಿಮಾನಿಗಳು ಜಗ್ಗೇಶ್ ಅವ್ರನ್ನ ಸುತ್ತುವರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ದರ್ಶನ್ ಮತ್ತು ಅಭಿಮಾನಿಗಳ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ‌. ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್​, ಆ ಆಡಿಯೋದಲ್ಲಿ ಮಾತನಾಡಿರೋದು ನಾನಲ್ಲಾ ಎಂದು ಹೇಳುವ ಮೂಲಕ ದರ್ಶನ್ ಅಭಿಮಾನಿಗಳನ್ನು ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ.

ಹಾಗೆಯೇ ನನ್ನ ಮತ್ತು ದರ್ಶನ್ ಗೆಳೆತನದ ಮಧ್ಯೆ ಯಾರೋ ಹುಳಿ ಹಿಂಡುತ್ತಿದ್ದಾರೆ. ನಾನು ದರ್ಶನ್ ಬಗ್ಗೆ ಎಲ್ಲೂ ಕೆಟ್ಟದಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Last Updated : Feb 22, 2021, 4:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.