ಮೈಸೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ತರಬೇತಿ ನಿರತರಾಗಿರುವ 4,000 ಟೆಕ್ಕಿಗಳು ಹಂತ ಹಂತವಾಗಿ ಊರಿಗೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ.
ಐಟಿ ಬಿಟಿ, ಕಾರ್ಪೊರೇಟ್ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳು ಉದ್ಯಮಿಗಳನ್ನು ಅವರವರ ಊರಿಗೆ ಕಳುಹಿಸುತ್ತಿವೆ. ಅದರಂತೆ ಇನ್ಫೋಸಿಸ್ನಲ್ಲಿ ಗ್ಲೋಬಲ್ ಎಜುಕೇಶನ್ ಸೆಂಟರ್ನಲ್ಲಿ ತರಬೇತಿ ನಿರತರಾಗಿರುವ 4000 ಟೆಕ್ಕಿಗಳನ್ನು ಹಂತಹಂತವಾಗಿ ಊರಿಗೆ ಕಳುಹಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ.
ಇದಕ್ಕಾಗಿಯೇ ಕೆಎಸ್ಆರ್ಟಿಸಿ 20 ಬಸ್ಗಳನ್ನು ಒದಗಿಸಿದ್ದು, ಬಸ್ಗಳು ಪುಣೆ, ಹೈದರಾಬಾದ್, ಸಿಕಂದರಾಬಾದ್, ಚೆನ್ನೈ, ಬೆಂಗಳೂರು, ಮಂಗಳೂರು, ಕೆಂಪೇಗೌಡ ವಿಮಾನ ನಿಲ್ದಾಣ, ಕೇರಳ ಕೊಟ್ಟಾಯಂ, ತಿರುವನಂತಪುರಂ ಸೇರಿದಂತೆ ಹಲವು ಕಡೆಗಳಿಗೆ ಸಂಚರಿಸುತ್ತಿವೆ.