ETV Bharat / city

ಲಾಕ್​​​ಡೌನ್ ಎಫೆಕ್ಟ್ : ಮೈಸೂರು ಜಿಲ್ಲೆಯಲ್ಲಿ ಹೆಚ್ಚಾದ ಬಾಲ್ಯ ವಿವಾಹ ಪ್ರಕರಣಗಳು

author img

By

Published : Jun 18, 2021, 5:39 PM IST

ಈ ಕೋವಿಡ್ ಸಮಯದಲ್ಲಿ ಪೋಷಕರು, ಹಲವು ಕನಸುಗಳನ್ನು ಕಾಣುತ್ತಿರುವ ಮಕ್ಕಳನ್ನು ಹಾಗೂ ಉಜ್ವಲ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿರುವ ಸಮಯದಲ್ಲಿ ಬಾಲ್ಯ ವಿವಾಹವನ್ನು ಮಾಡಿ ಮಕ್ಕಳ ಭವಿಷ್ಯವನ್ನು ನಾಶಮಾಡಿ ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಆದರೂ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಸಾಧ್ಯವಾದಷ್ಟು ಬಾಲ್ಯ ವಿವಾಹಗಳನ್ನು ಜಿಲ್ಲೆಯಲ್ಲಿ ತಡೆದಿದೆ..

increased-child-marriage-in-mysore-district-news
ಹೆಚ್ಚಾದ ಬಾಲ್ಯ ವಿವಾಹ ಪ್ರಕರಣ

ಮೈಸೂರು : ಲಾಕ್‌ಡೌನ್ ಸಮಯವಾದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳು ಮಕ್ಕಳ ಮದುವೆಯಾದರೆ ಸಾಕು ಎಂಬಂತೆ ಅಪ್ರಾಪ್ತ ವಯಸ್ಸಿನಲ್ಲಿದ್ದರು ಕೂಡ ವಿವಾಹಕ್ಕೆ ಮುಂದಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಲಾಕ್‌ಡೌನ್ ಸಮಯದಲ್ಲಿ ಹೆಚ್ಚಾಗಿವೆ. ತಮ್ಮ ಮಕ್ಕಳು ಅಪ್ರಾಪ್ತರಾಗಿದ್ದರೂ ಸಹ ಪೋಷಕರು ಮದುವೆಯನ್ನು ಮಾಡಿ ಕಾನೂನು ಉಲ್ಲಂಘನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿವೆ.

ಓದಿ: ಅನುಮಾನಾಸ್ಪದ ರೀತಿ ಗನ್​ಮ್ಯಾನ್ ಸಾವು.. ಆತ್ಮಹತ್ಯೆಯೋ, ಕೊಲೆಯೋ ಎಂಬುದು ನಿಗೂಢ..

ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದೆ. ಇದರ ನಿಯಂತ್ರಣ ಕೂಡ ಆಗದೇ ಇರುವ ಪರಿಸ್ಥಿತಿ ಮೂಡಿದೆ. ಇಂತಹ ಸಮಯದಲ್ಲಿ ಹಲವು ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ ಊಟಕ್ಕೂ ಸಹ ಪರದಾಡುವ ಪರಿಸ್ಥಿತಿ ಉದ್ಭವವಾಗಿದೆ. ದುಡಿಯುವ ಕೈಗಳು ಮನೆಯಲ್ಲಿ ಕೈಕಟ್ಟಿ ಕುಳಿತಿವೆ. ಮನೆಯನ್ನು ಸಹ ನಡೆಸಲು ಆಗದೇ ಇರುವ ಕಾರಣ ಪೋಷಕರು ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದಾರೆ.

ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ 2020ರಲ್ಲಿ ಬಾಲ್ಯ ವಿವಾಹ ಸಂಬಂಧ 272 ದೂರು ಬಂದಿವೆ. ಅವುಗಳಲ್ಲಿ 242 ಬಾಲ್ಯ ವಿವಾಹಗಳನ್ನು ತಾಳಿ ಕಟ್ಟುವುದಕ್ಕೂ ಮುನ್ನವೇ ಯಶಸ್ವಿಯಾಗಿ ತಡೆಯಲಾಗಿದೆ. 30 ಬಾಲ್ಯ ವಿವಾಹಗಳು ನಡೆದು ಹೋಗಿವೆ. ಇದಕ್ಕೆ ಸಂಬಂಧಪಟ್ಟವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಈ ವರ್ಷ 2021ರಲ್ಲಿ ಈವರೆಗೆ 24 ದೂರು ಬಂದಿವೆ. 23 ಬಾಲ್ಯ ವಿವಾಹವನ್ನು ತಡೆಯಲಾಗಿದೆ. 1 ಅಪ್ರಾಪ್ತರ ಮದುವೆ ನಡೆದುಹೋಗಿದೆ.

ನಗರ ಭಾಗದಲ್ಲಿ ನೋಡುವುದಾದರೆ 2020ರಲ್ಲಿ 27 ದೂರು ಬಂದಿವೆ. 21 ಬಾಲ್ಯವಿವಾಹ ತಡೆಯಲಾಗಿದೆ. 6 ಬಾಲ್ಯ ವಿವಾಹಗಳು ನಡೆದಿವೆ. ಈ ವರ್ಷದಲ್ಲಿ ಅಂದರೆ 2021ರಲ್ಲಿ 12 ದೂರುಗಳು ಬಂದಿವೆ. ಇದರಲ್ಲಿ 8 ಬಾಲ್ಯ ವಿವಾಹವನ್ನು ತಡೆಯಲಾಗಿದ್ದು, 4 ವಿವಾಹಗಳು ನಡೆದಿವೆ. ಶಾಲೆಗಳು ಎಂದಿನಂತೆ ನಡೆಯುತ್ತಿದ್ದರೆ, ವಿದ್ಯಾರ್ಥಿಗಳೇ ತಮ್ಮ ಗೆಳತಿಯರಿಗೆ ಮದುವೆ ನಡೆಯುತ್ತಿದೆ ಎಂಬ ಮಾಹಿತಿ ನೀಡುತ್ತಿದ್ದರು.

ಬಾಲ್ಯ ವಿವಾಹದಿಂದಾಗುವ ಅನಾಹುತ, ಅಪರಾಧ ಕುರಿತು ಎಲ್ಲಾ ಶಾಲಾ ಮಕ್ಕಳಿಗೂ ತಿಳಿಸಲಾಗಿರುತ್ತದೆ. ಆದರೆ, ಕೊರೊನಾ ಲಾಕ್‌ಡೌನ್‌ನಿಂದ ಶಾಲೆಗಳು ಮುಚ್ಚಿರುವುದು ಬಾಲ್ಯ ವಿವಾಹಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿದೆ. ರಜೆ ಇರುವುದರಿಂದ ಮನೆಯಲ್ಲೇ ಗುಟ್ಟಾಗಿ ಮದುವೆ ಮಾಡಲು ಕೆಲವರು ಮುಂದಾಗುತ್ತಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ದಿವಾಕರ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಈ ಕೋವಿಡ್ ಸಮಯದಲ್ಲಿ ಪೋಷಕರು, ಹಲವು ಕನಸುಗಳನ್ನು ಕಾಣುತ್ತಿರುವ ಮಕ್ಕಳನ್ನು ಹಾಗೂ ಉಜ್ವಲ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿರುವ ಸಮಯದಲ್ಲಿ ಬಾಲ್ಯ ವಿವಾಹವನ್ನು ಮಾಡಿ ಮಕ್ಕಳ ಭವಿಷ್ಯವನ್ನು ನಾಶಮಾಡಿ ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಆದರೂ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಸಾಧ್ಯವಾದಷ್ಟು ಬಾಲ್ಯ ವಿವಾಹಗಳನ್ನು ಜಿಲ್ಲೆಯಲ್ಲಿ ತಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.